ಬೆಂಗಳೂರುಳ: ವಿದ್ಯುತ್ ದರ ಏರಿಕೆಗೆ ನಿನ್ನೆ (ಸೋಮವಾರ) ಆದೇಶ ಹೊರಡಿಸಿ ಶಾಕ್ ಕೊಟ್ಟಿದ್ದ ಬೆಸ್ಕಾಂ, ಇದೀಗ ವಿದ್ಯುತ್ ವ್ಯತ್ಯಯದ ಶಾಕ್ ಕೊಟ್ಟಿದೆ. ಬೆಂಗಳೂರಿನಲ್ಲಿ ಸಾಕಷ್ಟು ಕಡೆಗಳಲ್ಲಿ ಇಂದು ವಿದ್ಯುತ್ ಕಡಿತ ಮಾಡಲಾಗುತ್ತಿದೆ.
ಬೆಂಗಳೂರಿನ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ವಲಯದ ಕೆಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಕಟ್ ಆಗಲಿದೆ.
ಪಶ್ಚಿಮ ವಿಭಾಗದ ಚಂದ್ರಾಲೇಔಟ್, ನಂಜರಸಪ್ಪ ಲೇಔಟ್, ಸ್ಕೈಲೈನ್, ಬಿಬಿಎಂಪಿ ಪಾರ್ಕ್, ಉತ್ತರ ವಿಭಾಗದ ಮಲ್ಲೇಶ್ವರ, ದೇವಯ್ಯ ಪಾರ್ಕ್, ವಯ್ಯಾಲಿ ಕಾವಲ್, ಮತ್ತಿಕೆರೆ, ಆರ್‌ಎಂಬಿ, ಐಐಎಸ್‌ಸಿ, ಪ್ಲಾಲೇಸ್ ಗುಟ್ಟಹಳ್ಳಿ, ದೋಭಿಘಾಟ್‌ನಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ.
ಇನ್ನು ಇಂದು ಪಶ್ಚಿಮ ವಿಭಾಗದ ವಿಜಯನಗರ, ಬ್ಯಾಡರಹಳ್ಳಿ, ಪೂರ್ವ ಶಿವಾಜಿನಗರ, ಗೋವಿಂದಪುರ, ಇಂದಿರಾನಗರ, ರಾಮಮೂರ್ತಿನಗರ, ಅಕ್ಷಯ ನಗರ, ಹೊಯ್ಸಳ ನಗರ, ಸಾಯಿ ಗಾರ್ಡನ್, ಉತ್ತರ ವಿಭಾಗದ ಜಾಲಹಳ್ಳಿ, ಅಬ್ಬಿಗೆರೆ, ಕಾನ್ಶಿರಾಂ ನಗರ, ಎಚ್‌ಎಂಟಿ ಇಂಡಸ್ಟ್ರಿಯಲ್ ಏರಿಯಾ, ಅಬ್ಬಿಗೆರೆ ಹಾಗೂ ವೆಸ್ಟ್ ಡಿವಿಜನ್‌ನ ಕೆಂಗೇರಿ, ಆರ್.ಆರ್. ಲೇಔಟ್, ಅಂಜನಾ ನಗರ, ಹೇರೋಹಳ್ಳಿ, ಬ್ಯಾಡರಹಳ್ಳಿ, ಆರ್.ಆರ್. ನಗರ ಸೇರಿದಂತೆ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಅಂತ ಬೆಸ್ಕಾಂ ತಿಳಿಸಿದೆ.
Kshetra Samachara
05/04/2022 08:55 am