ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಲಿಕಾನ್ ಸಿಟಿಯಲ್ಲಿ ಇಂದು ಹಲವೆಡೆ ವಿದ್ಯುತ್ ವ್ಯತ್ಯಯ

ಬೆಂಗಳೂರು: ನಿರ್ವಹಣೆ ಕಾಮಗಾರಿಯಿಂದ ಬೆಂಗಳೂರಿನಲ್ಲಿ ಇನ್ನೆರಡು ದಿನ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ನಿರ್ವಹಣಾ ಕೆಲಸದಿಂದಾಗಿ ಇಂದು (ಬುಧವಾರ) ಸಿಲಿಕಾನ್ ಸಿಟಿಯಲ್ಲಿ ಪವರ್ ಕಟ್ ಇರಲಿದೆ.

ಸಾರಕ್ಕಿ ಮಾರುಕಟ್ಟೆ, ಲಾಲ್‌ಬಾಗ್ ರಸ್ತೆ, ವರ್ತೂರು, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ವಿದ್ಯಾಪೀಠ ರಸ್ತೆ ಮುಂತಾದ ಏರಿಯಾಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರೆಂಟ್ ಇರುವುದಿಲ್ಲ.

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಜಿ ರಸ್ತೆ, ಸಿಂಧಿ ಆಸ್ಪತ್ರೆ, ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಸುಧಾಮನಗರ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಜರಗನಹಳ್ಳಿ, ಕೆಆರ್ ರಸ್ತೆ, ಕಿಮ್ಸ್ ಕಾಲೇಜು ರಸ್ತೆ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ ವೃತ್ತ, ಈಜಿಪುರ, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಪಾಣತ್ತೂರು ಮುಖ್ಯ ರಸ್ತೆ, ಕುಂದಲಹಳ್ಳಿ ಗ್ರಾಮ, ವರ್ತೂರು ರಸ್ತೆ, ಮಾರತ್​ಹಳ್ಳಿ, ಆನಂದ ನಗರ, ಸೇವಾಶ್ರಮ ನಗರ, ಕಾಳೇನ ಅಗ್ರಹಾರ ಮತ್ತು ವಡ್ಡರಪಾಳ್ಯದಲ್ಲಿ ಕರೆಂಟ್ ಇರುವುದಿಲ್ಲ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನ್ಯೂ ಬಿಇಎಲ್ ರಸ್ತೆ, ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಎಂಎಸ್ ಪಾಳ್ಯ, ಕೊಡಿಗೇಹಳ್ಳಿ ಟಾಟಾನಗರ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಸಾಯಿನಗರ 2ನೇ ಹಂತ, ಕೆಎಚ್‌ಬಿ ಕಾಲೋನಿ, ಭುವನೇಶ್ವರಿ ನಗರ, ಕನಕ ನಗರ ಮತ್ತು ಕಲ್ಯಾಣ ನಗರದಲ್ಲಿ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸುದ್ದಗುಂಟೆ ಪಾಳ್ಯ, ಎ ನಾರಾಯಣಪುರ, ದೂರವಾಣಿ ನಗರ, ಕೆಜಿ ಪುರ ಮುಖ್ಯರಸ್ತೆ, ಉದಯನಗರ, ಕೆಜಿ ಪುರ, ಗೌತಮಪುರ, ಜೋಗುಪಾಳ್ಯ, ಗೋವಿಂದಪುರ, ರಷದ್ ನಗರ, ಎಚ್‌ಬಿಆರ್, ಅಯ್ಯಪ್ಪನಗರದಲ್ಲಿ ಕರೆಂಟ್ ಇರುವುದಿಲ್ಲ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸರಸ್ವತಿ ನಗರ, ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರ, ನ್ಯಾಯಾಧೀಶರ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಶಿಕ್ಷಕರ ಕಾಲೋನಿ, ಜೆಸಿ ನಗರ, ಅಗ್ರಹಾರ ದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಹನುಮಂತರಾಯನ ಪಾಳ್ಯ, ಅಮರಜ್ಯೋತಿ ರಸ್ತೆ, ವಿದ್ಯಾಪೀಠದ ರಸ್ತೆ, ವೀರಸಂದ್ರ, ಕೆಂಗೇರಿ ಮುಖ್ಯರಸ್ತೆ, ದುಬಾಸಿಪಾಳ್ಯ, ಮಲ್ಲತ್ತಹಳ್ಳಿ ಲೇಔಟ್ ಮತ್ತು ಭವಾನಿನಗರದಲ್ಲಿ ಪವರ್ ಕಟ್ ಇರಲಿದೆ.

Edited By : Nagaraj Tulugeri
Kshetra Samachara

Kshetra Samachara

16/02/2022 10:58 am

Cinque Terre

644

Cinque Terre

0

ಸಂಬಂಧಿತ ಸುದ್ದಿ