ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಫವರ್ ಕಟ್ ಇರಲಿದೆ

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಕೂಡ ಹಲವು ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ. ವೀಕೆಂಡ್ ಆದ್ದರಿಂದ ಮನೆಯಲ್ಲೇ ಇರುವ ಸಿಲಿಕಾನ್ ಸಿಟಿಯ ಮಂದಿ ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ಪವರ್ ಕಟ್ ಸಮಸ್ಯೆಯನ್ನು ಅನುಭವಿಸಬೇಕಾಗುತ್ತದೆ. ನಿರ್ವಹಣಾ ಕಾರ್ಯದಿಂದಾಗಿ ಇಂದು ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಜಯನಗರ, ಮಾರತ್​ಹಳ್ಳಿ, ಪೀಣ್ಯ, ಚಂದ್ರಾ ಲೇಔಟ್, ಬಸವೇಶ್ವರನಗರ, ಹಂಪಿ ನಗರ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರು ದಕ್ಷಿಣ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ 4ನೇ ಬ್ಲಾಕ್, ಶಾಂತಿನಗರ, ವಿನಾಯಕ ನಗರ, ಕನಕ ಲೇಔಟ್, ಗೌಡನಪಾಳ್ಯ, ಕೋನೇನ ಅಗ್ರಹಾರ, ಮಾರತಹಳ್ಳಿ, ಸಂಜಯ ನಗರ, ಮಂಜುನಾಥ ನಗರ, ಪರಂಗಿಪಾಳ್ಯ, ಸರ್ಜಾಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಬಸಾಪುರ ಮುಖ್ಯರಸ್ತೆ ಮತ್ತು ಜಿಎಸ್ ಪಾಳ್ಯದಲ್ಲಿ ಕರೆಂಟ್ ಇರುವುದಿಲ್ಲ.

ಬೆಂಗಳೂರು ಉತ್ತರ ವಲಯದಲ್ಲಿ ಹನುಮಾನ್‌ ಲೇಔಟ್‌, ಬಾಲಾಜಿ ಲೇಔಟ್‌, ಎಂಎಲ್‌ಎ ಲೇಔಟ್‌, ಆರ್‌ಟಿ ನಗರ ಮತ್ತು ಪೀಣ್ಯ ಗ್ರಾಮಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಸೇಂಟ್ ಜೋಸೆಫ್ ರಸ್ತೆ ಮತ್ತು ಮರ್ಫಿ ಟೌನ್‌ನಲ್ಲಿ ಇಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.

ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಹಂಪಿನಗರ, ಸುಬ್ಬಣ್ಣ ಗಾರ್ಡನ್, ಶಿವಾನಂದನಗರ, ಗಂಗೊಂಡನಹಳ್ಳಿ, ಚಂದ್ರಾಲೇಔಟ್, ಬಸವೇಶ್ವರ ನಗರದ ಕೆಲವು ಭಾಗಗಳು, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಬ್ಬೇಹಳ್ಳಿ, ಹೊಸಹಳ್ಳಿ ರಸ್ತೆ ಪ್ರದೇಶ ಮತ್ತು ಡಿ ಗ್ರೂಪ್ ಲೇಔಟ್ 1 ನೇ ಬ್ಲಾಕ್ ಮುಂತಾದ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

12/02/2022 12:23 pm

Cinque Terre

766

Cinque Terre

0

ಸಂಬಂಧಿತ ಸುದ್ದಿ