ಬೆಂಗಳೂರು: ಬೆಂಗಳೂರಿನ ಬಹುತೇಕ ಏರಿಯಾಗಳಲ್ಲಿ ಇಂದಿನಿಂದ 2 ದಿನ ಅಂದರೆ ಇಂದು (ಶುಕ್ರವಾರ) ಮತ್ತು ನಾಳೆ (ಶನಿವಾರ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ನಿರ್ವಹಣಾ ಕಾರ್ಯದಿಂದಾಗಿ ಇಂದು ಮತ್ತು ಶನಿವಾರ ಬೆಂಗಳೂರಿನ ಹಲವೆಡೆ ಪವರ್ ಕಟ್ ಇರಲಿದೆ. ಬೊಮ್ಮನಹಳ್ಳಿ, ಮುರುಗೇಶಪಾಳ್ಯ, ಕುಮಾರಸ್ವಾಮಿ ಲೇಔಟ್, ಯಶವಂತಪುರ, ವೈಟ್‌ಫೀಲ್ಡ್, ತ್ಯಾಗರಾಜನಗರ, ಬಸವೇಶ್ವರನಗರ, ಚಂದ್ರಾ ಲೇಔಟ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ಇಂದು (ಶುಕ್ರವಾರ) ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕೆ.ಆರ್ ರಸ್ತೆ, ಜಯನಗರ, ನಂಜಪ್ಪ ರಸ್ತೆ, ಶಾಂತಿನಗರ, ಜಾರಗನಹಳ್ಳಿ, ಕೃಷ್ಣ ದೇವರಾಯ ನಗರ, ವೈ.ವಿ ಅಣ್ಣಯ್ಯ ರಸ್ತೆ, ಬಿಕಿಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಭ ನಗರ, ಶಾರದಾ ನಗರ, ಸಿದ್ದಾಪುರ, ಸೋಮೇಶ್ವರನಗರ, ಸಾರ್ವಭೌಮನಗರ, ಮುರುಗೇಶಪಾಳ್ಯ, ಕುಂದಲಹಳ್ಳಿ ಗ್ರಾಮ, ಬಸವನಗರ, ವಿನಾಯಕ ನಗರ, ದೊಡ್ಡ ನೆಕುಂದಿ, ಬೊಮ್ಮನಹಳ್ಳಿ, ಬೇಗೂರು ಮುಖ್ಯರಸ್ತೆ ಹಾಗೂ 5ನೇ ಬ್ಲಾಕ್ ಬಿಡಿಎಯಲ್ಲಿ ಪವರ್ ಕಟ್ ಇರಲಿದೆ.
ಬೆಂಗಳೂರು ಉತ್ತರ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮರಿಯಪ್ಪನಪಾಳ್ಯ, ಗಾಯತ್ರಿ ನಗರ, ನಾಗಪ್ಪ ಬ್ಲಾಕ್, ಸದಾಶಿವ ನಗರ, ನ್ಯೂ ಬಿಇಎಲ್ ರಸ್ತೆ, ಯಶವಂತಪುರ 1ನೇ ಮುಖ್ಯರಸ್ತೆ, ಅಬ್ಬಿಗೆರೆ, ದೊಡ್ಡಬ್ಯಾಲಕೆರೆ, ಕೆಂಪಾಪುರ, ಸಿಲ್ವೆಪುರ, ಕುಂಬಾರಹಳ್ಳಿ, ಆದಿತ್ಯನಗರ, ತಾತ ನಗರ, ದೇವಿ ನಗರ, ಲೊಟ್ಟೆಹಳ್ಳಿ, ಲೊಟ್ಟೆಹಳ್ಳಿ, ಯಶವಂತಪುರ 1ನೇ ಮುಖ್ಯರಸ್ತೆ, ಸಾಯಿನಗರ 2ನೇ ಹಂತ, ಹೆಗಡೆ ನಗರ, ದ್ವಾರಕಾ ನಗರ, ಭುವನೇಶ್ವರಿ ನಗರ, ಕನಕ ನಗರ, ಶೆಟ್ಟಿಹಳ್ಳಿ, ಹೆಸರಘಟ್ಟ ಮುಖ್ಯರಸ್ತೆ, ಭುವನೇಶ್ವರಿ ನಗರ, ಟಿ ದಾಸರಹಳ್ಳಿಯಲ್ಲಿ ಕರೆಂಟ್ ಇರುವುದಿಲ್ಲ.
ಬೆಂಗಳೂರಿನ ಪೂರ್ವ ವಲಯದಲ್ಲಿ ಇಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತವಾಗಲಿದೆ. ಸ್ವಾಮಿ ವಿವೇಕಾನಂದ ರಸ್ತೆ, ವರ್ತೂರು ರಸ್ತೆ, ನಾಗವಾರ ಪಾಳ್ಯ, ಕೆಜಿ ಪುರ ಮುಖ್ಯ ರಸ್ತೆ, ಕೋಡಿಹಳ್ಳಿ, ಮರ್ಗೊಂಡನಹಳ್ಳಿ, ಮರ್ಫಿ ಟೌನ್, ಎಚ್‌ಬಿಆರ್ ಲೇಔಟ್, ವೈಟ್‌ಫೀಲ್ಡ್ ಮುಖ್ಯ ರಸ್ತೆ ಮತ್ತು ಕುಂಬೇನ ಅಗ್ರಹಾರದಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ.
ಬೆಂಗಳೂರು ಪಶ್ಚಿಮ ವಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹಂಪಿನಗರ, ಶಿವಾನಂದ ನಗರ, ಗಂಗೊಂಡನ ಹಳ್ಳಿ, ಚಂದ್ರಾಲೇಔಟ್, ಬಸವೇಶ್ವರನಗರದ ಕೆಲವು ಭಾಗಗಳು, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಬ್ಬೇಹಳ್ಳಿ, ವೀವರ್ಸ್ ಕಾಲೋನಿ, ತ್ಯಾಗರಾಜನಗರ, ಬಾಲಶಾಪಾಳ್ಯ ರಸ್ತೆ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ವಿದ್ಯಾಪೀಠ ರಸ್ತೆ, ಕುಂಪುರಹಳ್ಳಿ ಮುಖ್ಯರಸ್ತೆ, ಕುಂಪುರಹಳ್ಳಿ ಮುಖ್ಯರಸ್ತೆ, ಕುಂಪುರಹಳ್ಳಿ ಮುಖ್ಯರಸ್ತೆ, ಗಂಗಾನಗರ, ದ್ವಾರಕಾಬಸ ರಸ್ತೆ, ಅಂಬೇಡ್ಕರ್ ನಗರ, ಉಳ್ಳಾಲ ಬಸ್ ನಿಲ್ದಾಣ ಮತ್ತು ಬಿಡಿಎ ಕಾಲೋನಿಯಲ್ಲಿ ಕರೆಂಟ್ ಇರುವುದಿಲ್ಲ.
ಶನಿವಾರ ಪವರ್ ಕಟ್ ಇರುವ ಏರಿಯಾಗಳಿವು:
ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ 4ನೇ ಬ್ಲಾಕ್, ಶಾಂತಿನಗರ, ವಿನಾಯಕ ನಗರ, ಕನಕ ಲೇಔಟ್, ಗೌಡನಪಾಳ್ಯ, ಕೋನೇನ ಅಗ್ರಹಾರ, ಮಾರತಹಳ್ಳಿ, ಸಂಜಯ ನಗರ, ಮಂಜುನಾಥ ನಗರ, ಪರಂಗಿಪಾಳ್ಯ, ಸರ್ಜಾಪುರ ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಕೋನಪ್ಪನ ಅಗ್ರಹಾರ, ದೊಡ್ಡತೋಗೂರು, ಬಸಾಪುರ ಮುಖ್ಯರಸ್ತೆ ಮತ್ತು ಜಿಎಸ್ ಪಾಳ್ಯದಲ್ಲಿ ನಾಳೆ ಕರೆಂಟ್ ಇರುವುದಿಲ್ಲ.
ಬೆಂಗಳೂರು ಉತ್ತರ ವಲಯದಲ್ಲಿ ಹನುಮಾನ್ ಲೇಔಟ್, ಬಾಲಾಜಿ ಲೇಔಟ್, ಎಂಎಲ್‌ಎ ಲೇಔಟ್, ಆರ್‌ಟಿ ನಗರ ಮತ್ತು ಪೀಣ್ಯ ಗ್ರಾಮಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಸೇಂಟ್ ಜೋಸೆಫ್ ರಸ್ತೆ ಮತ್ತು ಮರ್ಫಿ ಟೌನ್‌ನಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಪವರ್ ಕಟ್ ಇರಲಿದೆ.
ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಹಂಪಿನಗರ, ಸುಬ್ಬಣ್ಣ ಗಾರ್ಡನ್, ಶಿವಾನಂದನಗರ, ಗಂಗೊಂಡನಹಳ್ಳಿ, ಚಂದ್ರಾಲೇಔಟ್, ಬಸವೇಶ್ವರನಗರದ ಕೆಲವು ಭಾಗಗಳು, ಮಂಜುನಾಥ್ ನಗರ, ಅಗ್ರಹಾರ ದಾಸರಹಳ್ಳಿ, ಕೆಬ್ಬೇಹಳ್ಳಿ, ಹೊಸಹಳ್ಳಿ ರಸ್ತೆ ಪ್ರದೇಶ ಮತ್ತು ಡಿ ಗ್ರೂಪ್ ಲೇಔಟ್ 1 ನೇ ಬ್ಲಾಕ್ ಮುಂತಾದ ಪ್ರದೇಶಗಳಲ್ಲಿ ಬೆಳಿಗ್ಗೆ 9ರಿಂದ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
Kshetra Samachara
11/02/2022 11:16 am