ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಳವೆ ಬಾವಿಯಲ್ಲಿ ಚಿಮ್ಮಿದ ಗಂಗೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲಾಗಿತ್ತು. ಚಿಕ್ಕಬಳ್ಳಾಪುರ & ದೊಡ್ಡಬಳ್ಳಾಪುರ ನಗರಗಳ ಕುಡಿಯುವ ನೀರಿನ‌ ಜಕ್ಕಲಮಡಗು ಜಲಾಶಯ ಸಮೀಪದ ನಾರಸಿಂಹನಹಳ್ಳಿ ಬಳಿ ಕೊಳವೆ ಬಾವಿ ಕೊರೆಸುವ ವೇಳೆ ಸಖತ್ತಾಗಿ ಬೋರ್ವೆಲ್ ನಲ್ಲಿ‌ ನೀರು ಸಿಕ್ಕಿದೆ.

350 ಅಡಿ ಆಳ ಕೊರೆಸುವ ವೇಳೆ ಅಂತರ್ಜಲದ ದೊಡ್ಡ ಕಾಲುವೆ ನೀರು ಬೋರ್ವೆಲ್ ಕೇಸಿಂಗ್ ಪೈಪನ್ನು ಚಿಮ್ಮಿ 30ಅಡಿಗು ಮೇಲೆ ಚಿಮ್ಮಿದೆ. ಗ್ರಾಮಸ್ಥರಲ್ಲಿ ಸಂಭ್ರಮವೋ ಸಂಭ್ರಮ. ಯಥೇಚ್ಛವಾಗಿ ನೀರು ಸಿಕ್ಕಿ ಪಾತಾಳದಿಂದ ನೀರಿನ ಬೃಹತ್ ಕಾಲುವೆ ಮೇಲೆ ಚಿಮ್ಮಿದಂತಾಗಿ ಗ್ರಾಮಸ್ಥರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

15/06/2022 10:05 pm

Cinque Terre

2.4 K

Cinque Terre

0

ಸಂಬಂಧಿತ ಸುದ್ದಿ