ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಬಡ್ಡಿ ಪಂದ್ಯಾವಳಿಯಲ್ಲಿ ರಾಮನಗರಕ್ಕೆ ಮೊದಲ ಸ್ಥಾನ

ಆನೇಕಲ್ : ಅಂಬೇಡ್ಕರ್ ಜಯಂತಿ ಪ್ರಯುಕ್ತ ಆನೇಕಲ್ ಪಟ್ಟಣದ ಎಎಸ್ ಬಿ ಆಟದ ಮೈದಾನದಲ್ಲಿ ಕಬಡ್ಡಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಪ್ರೊ ಕಬಡ್ಡಿಯಲ್ಲಿ ಗುರುತಿಸಿಕೊಂಡಿದ್ದ ಸ್ಟಾರ್ ಆಟಗಾರರು ಈ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗಿಯಾಗಿದ್ದರು.

ಯುಪಿ ಯೋಧ , ಬೆಂಗಳೂರು ಬುಲ್ಸ್, ಬೆಂಗಾಲ್ ವಾರಿಯರ್ಸ್ ತಂಡದಲ್ಲಿ ಗುರುತಿಸಿಕೊಂಡಿದ್ದ ಸಂತೋಷ್, ಸುನಿಲ್ ಹನುಮಂತಪ್ಪ ಮನೋಜ್,ಚೇತನ್ ಸೇರಿದಂತೆ ರಾಜ್ಯಮಟ್ಟದ ಕ್ರೀಡಾಪಟುಗಳು ಸಹ ಪಂದ್ಯದಲ್ಲಿ ಭಾಗಿಯಾಗಿದ್ದರು .

ಇನ್ನು ಬೆಳಗಿನಿಂದ ಸುಮಾರು ಮೂವತ್ತಕ್ಕೂ ಹೆಚ್ಚು ಟೀಂ ಭಾಗಿಯಾಗಿದ್ದು ಅಂತಿಮವಾಗಿ ಜೈ ಭೀಮ್ ತಂಡ ರಾಮನಗರ ಪ್ರಥಮ ಸ್ಥಾನ ಪಡೆದು ಎರಡನೇ ಸ್ಥಾನವನ್ನು ಎಸ್ ಬಿಕೆಸಿ ಕ್ಲಬ್ ತಂಡ ಪಡೆದಿದೆ.

ಇನ್ನು ಮೊದಲ ಸ್ಥಾನ ಗೆದ್ದೆ ತಂಡಕ್ಕೆ 30 ಸಾವಿರ ನಗದು ಮತ್ತು ಟ್ರೋಫಿಯನ್ನು ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ವತಿಯಿಂದ ನೀಡಿ ಸನ್ಮಾನಿಸಲಾಯಿತು. ಜೊತೆಗೆ 8 ಟ್ರೋಫಿ ಹಾಗೂ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ಇನ್ನು ಕಾರ್ಯಕ್ರಮದಲ್ಲಿ ದಲಿತ ಪ್ರಗತಿಪರ ಒಕ್ಕೂಟ ಹಾಗೂ ಅಂಬೇಡ್ಕರ್ ಸ್ಕೂಲ್ ಆಫ್ ಥಾಟ್ಸ್ ಹಾಗೂ ಕಬಡ್ಡಿ ತಂಡಗಳು ಭಾಗಿಯಾಗಿದ್ದರು.

Edited By : Shivu K
Kshetra Samachara

Kshetra Samachara

14/04/2022 09:03 am

Cinque Terre

3.25 K

Cinque Terre

0