ಬೆಂಗಳೂರು: ಪುನೀತ್ ಸಾವು ಈಗ ಎಲ್ಲ ಜಿಮ್ ಕ್ರೇಜ್ ಇರೋರಿಗೆ ಭಯ ಹುಟ್ಟಿಸಿದೆ. ಪವರ್ ಸ್ಟಾರ್ ಪುನೀತ್ ಥರ ವರ್ಕೌಟ್ ಮಾಡಿದರೆ, ನಮಗೂ ಸಾವು ಬರಬಹುದು ಅನ್ನುವ ಅನುಮಾನ ಈಗ ಬಹುತೇಕರ ಮನಸ್ಸಿನಲ್ಲಿ ಮನೆ ಮಾಡಿದೆ. ಆದರೆ, ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ಅದು ಹಾಗಲ್ಲ. ಹೀಗೆ ಅಂತ ತಮ್ಮದೇ ಅನುಭವವನ್ನ ವೀಡಿಯೋ ಮೂಲಕವೇ ಹಂಚಿಕೊಂಡಿದ್ದಾರೆ. ಜಿಮ್ ಮಾಡೋದ್ರಿಂದ ದೇಹದ ತೂಕ ಇಳಿಸಿಕೊಳ್ಳಬಹುದು. ನಾನು 253 ಕೆಜಿ ಇದ್ದೆ. ಸೂಕ್ತ ತರಬೇತಿ ಹಾಗೂ ಜಿಮ್ ಟ್ರೈನರ್ ರಘು ಅವರ ಮಾರ್ಗದರ್ಶನದಲ್ಲಿಯೇ 253 ಕೆಜಿ ತೂಕ ಇದ್ದ ನಾನೂ ಈಗ 120 ಕೆಜಿ ಆಗಿದ್ದೇನೆ. ವರ್ಕೌಟ್ ಮಾಡೋದರಿಂದ ಅಪಾಯವಿಲ್ಲ. ಎಲ್ಲವೂ ಒಳ್ಳೆಯದೇ ಆಗುತ್ತದೆ ಅಂತ PublicNext ಮೂಲಕ ಹೇಳಿದ್ದಾರೆ ಡೈರೆಕ್ಟರ್ ನಂದಕಿಶೋರ್.
Kshetra Samachara
30/10/2021 11:01 pm