ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅತಿ-ವೇಗವಾಗಿ ಚಾರ್ಜ್‌ ಆಗುವ ಬ್ಯಾಟರಿ ತಂತ್ರಜ್ಞಾನ ಲೋಕಾರ್ಪಣೆ

ಬೆಂಗಳೂರು: ಬೆಂಗಳೂರು ಸ್ಟಾರ್ಟ್‌ಅಪ್‌ನಿಂದ ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಹಾಗೂ ಬೆಂಕಿ ಹತ್ತಿಕೊಳ್ಳದ ಬ್ಯಾಟರಿ ತಂತ್ರಜ್ಞಾನ ಸಂಶೋಧಿಸಲಾಗಿದೆ. ಬ್ಯಾಟರಿ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾದ ನೋರ್ಡಿಶ್ಚೇ ಟೆಕ್ನಾಲಜೀಸ್ ವಿಶ್ವದಲ್ಲೇ ಅತಿ-ವೇಗವಾಗಿ ಚಾರ್ಜ್‌ ಆಗುವ ಹೊಸ ಬ್ಯಾಟರಿ ತಂತ್ರಜ್ಞಾನವನ್ನು ಲೋಕಾರ್ಪಣೆಗೊಳಿಸಿದ್ದಾರೆ.

ಲಿಥೀಯಂ ಇಯಾನ್‌ ಸೆಲ್ಸ್‌ ಬ್ಯಾಟರಿಗಿಂತಲೂ 50 ಪಟ್ಟು ಹೆಚ್ಚು ವೇಗದಲ್ಲಿ ಚಾರ್ಜ್‌ ಆಗುವ ಮತ್ತು ಅಷ್ಟೇ ಮಟ್ಟದ ಬ್ಯಾಟರಿ ಸಾಮರ್ಥ್ಯ ಹೊಂದಿರುವ, ನಾನ್‌ ಟಾಕ್ಸಿಕ್‌ ಮತ್ತು ಅಗ್ನಿ ನಿರೋಧಕ ಈ ತಂತ್ರಜ್ಞಾನವನ್ನು ಹೊಂದಿದೆ. ಬ್ಯಾಟರಿ ಕ್ಷೇತ್ರದಲ್ಲಿನ ಈ ವಿನೂತನ ಹಾಗೂ ಕ್ರಾಂತಿಕಾರಿ ತಂತ್ರಜ್ಞಾನವನ್ನು ಆದಿ ಚುಂಚನಗಿರಿ ಮಹಾ ಸಂಸ್ಥಾನದ ಮುಖ್ಯಸ್ಥರಾದ ಪರಮ ಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಲೋಕಾರ್ಪಣೆಗೊಳಿಸಿದ್ದಾರೆ.

ಅಲ್ಯೂಮಿನಿಯಂ – ಗ್ರಾಫೇನ್‌ ಪೌಚ್‌ ಸೆಲ್‌ ಬ್ಯಾಟರಿ ತಂತ್ರಜ್ಞಾನದ ವಿಶಿಷ್ಟತೆಗಳು:

• ಹಗುರ ಮತ್ತು ಅತಿವೇಗವಾಗಿ ಚಾರ್ಜ್‌ ಅಗುವ ಸಾಮರ್ಥ್ಯ

• ಹೈ ಎನರ್ಜಿ ಡೆನ್ಸಿಟಿ >150ವ್ಯಾಟ್‌/ಕೆಜಿ

• ಕೈಗೆಟಕುವ ದರ

• ಫ್ಲೇಕ್ಸಿಬಲ್‌ ಸೋರ್ಸ್‌ ಆಫ್‌ ಎನರ್ಜಿ ಸ್ಟೋರೇಜ್‌

• ಲಾರ್ಜ್‌ ರೇಂಜ್‌ ಆಫ್‌ ಟೆಂಪರೇಚರ್‌ನಲ್ಲಿ ಕಾರ್ಯನಿರ್ವಹಣೆ (From -25C to 60C)

• 5 ರಿಂದ 7 ವರ್ಷಗಳ ಶೆಲ್ಫ್‌ ಲೈಪ್‌

• ಸುಮಾರು >3000 ಬಾರಿ ರಿಚಾರ್ಜ್‌ ಮಾಡಬಹುದು

• ಎಕೋ ಫ್ರೇಂಡ್ಲಿ – ನಾನ್‌ ಟಾಕ್ಸಿಕ್‌ ಮತ್ತು ಬೆಂಕಿ ಹತ್ತಿಕೊಳ್ಳದೇ ಇರುವುದು

• ಹೈ ಟೆನ್ಸಿಲ್‌ ಸ್ಟ್ರೇಂಥ್‌

ಕಾರ್ಯಕ್ರಮದಲ್ಲಿ ಪುದುಚೆರಿ ಪಿಡ್ಬೂಡಿ ಮತ್ತು ಐಟಿ ಸಚಿವ ಕೆ ಲಕ್ಷ್ಮಿನಾರಾಯಣ, ಕರ್ನಾಟಕ ವಿಧಾನಪರಿಷತ್ತ ವಿರೋಧ ಪಕ್ಷದ ಪ್ರಧಾನ ವಿಪ್‌ ಪ್ರಕಾಶ್‌ ಕೆ. ರಾಥೋಡ್‌ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

28/05/2022 07:00 pm

Cinque Terre

2.25 K

Cinque Terre

0