ದೇವನಹಳ್ಳಿ: ಬೆಂಗಳೂರು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಕಳೆದ ಎರಡ್ಮೂರು ದಿನಗಳಿಂದ ಮಳೆ ಆರ್ಭಟ ಜೋರಾಗೆ ಇದೆ. ಇಂದು ಮುಂಜಾನೆ ಸುರಿದ ಭಾರಿ ಮಳೆಗೆ ದೇವನಹಳ್ಳಿ ಇತಿಹಾಸ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಾಲಯವೇ ನೀರಿನಿಂದ ಅಭಿಷೇಕಗೊಂಡಿದೆ. ದೇವನಹಳ್ಳಿಕೋಟೆ ಚಿಕ್ಕಕೆರೆ ದಡದಲ್ಲಿರುವ ಆಂಜನೇಯಸ್ವಾಮಿಗೆ ಕೆರೆ ನೀರೆ ಪಾದ ಸ್ಪರ್ಷಿಸಿ ಅಭಿಷೇಕ ಮಾಡ್ತಿರೋ ದೃಶ್ಯ ಕಣ್ತುಂಬಿಕೊಳ್ಳೋದೆ ಪರಮಾನಂದ. 24 ವರ್ಷಗಳ ನಂತರ ತುಂಬಿರುವ ಕೋಟೆ ಚಿಕ್ಕಕೆರೆಯ ಬಳಿಯಿಂದ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ ಪ್ರತ್ಯಕ್ಷ ವರದಿ ನಿಮಗಾಗಿ.
PublicNext
30/08/2022 05:47 pm