ಬೆಂಗಳೂರು: ಅದಿ ದೇವತೆ ಅಣ್ಣಮ್ಮ ದೇವಿಯ 14ನೇ ವಾರ್ಷಿಕೋತ್ಸವದ ಅಂಗವಾಗಿ ಕೆಆರ್ ಪುರದ ಹೊರಮಾವುನಲ್ಲಿ ಪಂಚಾಮೃತ, ಕುಂಕುಮಾರ್ಚನೆ, ಅಭಿಷೇಕ ಸಲ್ಲಿಸುವ ಮೂಲಕ ಉತ್ಸವ ಆಚರಿಸಲಾಯಿತು.
ಅಣ್ಣಮ್ಮ ದೇವಿಯ ಮೂರ್ತಿಯನ್ನು ವಿವಿಧ ನಗರಗಳಿಂದ ಮೆರವಣಿಗೆ ಮೂಲಕ ಕರೆಸಿಕೊಂಡು ವಿಶೇಷ ಪೂಜೆ ಸಲ್ಲಿಸಿ ಹೊರಮಾವು ಗ್ರಾಮಸ್ಥರು ಹಬ್ಬವನ್ನು ಆಚರಿಸುತ್ತಾರೆ.
ಗ್ರಾಮಸ್ಥರಾದ ಎಸ್.ಎ.ಪ್ರಸನ್ನ ಅವರು ಮೆಜೆಸ್ಟಿಕ್ ನಿಂದ ದೇವಿಯನ್ನು ಮೆರವಣಿಗೆ ಮಾಡಿ, ಹೊರಮಾವು ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ವಿಶೇಷವಾಗಿ 3 ದಿನಗಳು ಕಾರ್ಯಕ್ರಮ ಜರುಗಲಿದೆ ಎಂದರು.ಇನ್ನೂ ದೇವಸ್ಥಾನವನ್ನು ತೋರಣ, ಲೈಟಿಂಗ್ಸ್ ಗಳಿಂದ ಆಲಂಕಾರಿಸಲಾಗಿತ್ತು. ಸಾವಿರಾರು ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು.
Kshetra Samachara
12/12/2021 09:44 pm