ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತದಿಂದ ದೇವನಹಳ್ಳಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಭಾಷಣ ಮೊಟಕು ಗೊಳಿಸಲಾಯಿತು. ಇದರಿಂದಾಗಿ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಕೇಂದ್ರ ಘೋಷಣೆ ಮಾಡದೆ ಜಿಲ್ಲಾಡಳಿತ ಕಾರ್ಯಕ್ರಮ ಮಾಡುತ್ತಿದೆ. ಆದರೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ನೀಡಿ ಭಾಷಣ ಮಾಡದಂತೆ ಮಾಹಿತಿ ಬಂದಿದೆ. ದಲಿತ ಶಾಸಕನಾದ ನನಗೆ ಅವಮಾನ ಮಾಡ್ತಿದ್ದಾರೆ. ನನ್ನ ಹಕ್ಕು ಚ್ಯುತಿ ಮಾಡ್ತಿದ್ದಾರೆ. ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡ್ತೀನಿ ಎಂದು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ಶಾಸಕ ನಿಸರ್ಗ ನಾರಾಯಣಸ್ವಾಮಿ ಅಸಮಾಧಾನ ಹೊರ ಹಾಕಿದ್ದಾರೆ.
ಕಾರ್ಯಕ್ರಮಕ್ಕೆ ಹೋಗಿ ಭಾಷಣಕ್ಕೆ ಅವಕಾಶ ನೀಡಿ ಅಂತ ಕೇಳ್ತೀನಿ. ಅವಕಾಶ ಕೊಡದಿದ್ರೆ ಪ್ರತಿಭಟಿಸಿ ಕಾರ್ಯಕ್ರಮದಿಂದ ಹೊರಗಡೆ ಬರುವುದಾಗಿ ಶಾಸಕ ನಾರಾಯಣಸ್ವಾಮಿ ದೇವನಹಳ್ಳಿಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.
Kshetra Samachara
15/08/2022 03:28 pm