ಆನೇಕಲ್: ತಾಲೂಕಿನ ಬಿದರಗುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಉದಯಶ್ರೀ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪಕ್ಷಕ್ಕೆ ಇನ್ನಷ್ಟು ಬಲಪಡಿಸಿದರು.
ಬಿದರಗುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆದ ಹಿನ್ನಲೆಯಲ್ಲಿ ಇಡ್ಲಬೆಲೆ ಎರಡನೇ ವಾರ್ಡ್ ನ ಬಿಜೆಪಿ ಬೆಂಬಲಿತ ಉದಯಶ್ರೀ ಉಪಾಧ್ಯಕ್ಷ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಬೆಂಗಳೂರು ನಗರ ಬಮೂಲ್ ಅಧ್ಯಕ್ಷ ಬಿಜಿ ಆಂಜನಪ್ಪ, 'ಸರ್ಕಾರದಿಂದ ಬರುತ್ತಕಂತ ಅನುದಾನಗಳನ್ನು ಪಕ್ಷಾತೀತವಾಗಿ ಚಾಚೂತಪ್ಪದೆ ಕೆಲಸಮಾಡಬೇಕು. ಜತಗೆ ಬಿದರಗುಪ್ಪೆ ಗ್ರಾಮ ಪಂಚಾಯಿತಿ ಮಾದರಿ ಗ್ರಾಮ ಪಂಚಾಯಿತಿ ಆಗಬೇಕು. ಜೊತೆಗೆ 13 ಎಕರೆ ಜಾಗದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಲು ಜಿಲ್ಲಾ ಅಧಿಕಾರಿಗಳು ಹಾಗೂ ದಂಡಾಧಿಕಾರಿಗಳು ಸರ್ಕಾರದಿಂದ ಆದೇಶ ಹೊರಡಿಸಿದ್ದಾರೆ. ಇನ್ನೇನು ಕೆಲವೇ ದಿನಗಳು ಅದು ಕೂಡ ಕೆಲಸ ಪ್ರಾರಂಭವಾಗುತ್ತದೆ' ಎಂದು ತಿಳಿಸಿದರು.
Kshetra Samachara
12/04/2022 09:03 am