ಬೆಂಗಳೂರು : ಈಗಾಗಲೇ ಚೀನಾದಲ್ಲಿ ತಾಂಡವವಾಡುತ್ತಿರುವ ಕೊರೊನಾ ನಾಲ್ಕನೇ ಅಲೆ ಭಾರತದಲ್ಲಿ ಎರಡನೇ ಅಲೆಯಂತೆ ಹೆಚ್ಚೇನು ಪ್ರಭಾವ ಬೀರುವುದಿಲ್ಲ. ಆದರೆ ತಜ್ಞರು ಎಚ್ಚರದಿಂದ ಇರುವಂತೆ ಸೂಚಿಸಿದ್ದಾರೆ ಎಂದು ದೇವನಹಳ್ಳಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರದ ಜಿಲ್ಲಾ ಪಂಚಾಯ್ತಿ ಆವರಣದಲ್ಲಿ ನಡೆದ KD B ಸಭೆಯ ನಂತರ ಮಾಧ್ಯಮಗಳಿಗೆ ಉತ್ತರಿಸಿದರು.
ಎರಡನೇ ಅಲೆಯಲ್ಲಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿತ್ತು. ಎರಡನೇ ಅಲೆಯಷ್ಟು ತೀವ್ರತೆ ಮೂರನೇ ಅಲೆಯ ವೇಳೆಗೆ ಇರಲಿಲ್ಲ. ಇದೀಗ ನಾಲ್ಕನೇ ಅಲೆಯೂ ಸಹ ಭಾರತ ದೇಶ ಪ್ರವೇಶಿಸಿದೆ.
ಕೇಂದ್ರ & ರಾಜ್ಯ ಸರ್ಕಾರ ಕೋಟ್ಯಾಂತರ ಜನರಿಗೆ ವ್ಯಾಕ್ಸಿನೇಷನ್ ಹಾಕಿದ. ಬೂಸ್ಟರ್ ಡೋಸನ್ನು ಸಹ ಕೋಟ್ಯಾಂತರ ಜನ ಪಡೆದುಕೊಂಡಿದ್ದಾರೆ. ನಮ್ಮಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಆರೋಗ್ಯ ಸಚಿವರು ಸ್ಪಷ್ಟಪಡಿಸಿದ್ದಾರೆ.
PublicNext
09/04/2022 09:27 am