ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಿಎಫ್‌ಐ ನಿಷೇಧಕ್ಕೆ ಮುನ್ನ ಸರ್ವ ಪಕ್ಷ ಸಭೆ ಕರೆಯಬೇಕಿತ್ತು: ಪ್ರಜ್ವಲ್‌ ರೇವಣ್ಣ..!

ಬೆಂಗಳೂರು: ಪಿಎಫ್‌ಐ ನಿಷೇಧ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 'ಪಿಎಫ್‌ಐ ರೀತಿಯ ಸಂಘಟನೆಗಳು ಬಹಳಷ್ಟಿವೆ. ಬ್ಯಾನ್‌ ಮಾಡೋದಾದ್ರೆ ಎಲ್ಲವನ್ನೂ ಮಾಡಲಿ. ಇಲ್ಲವಾದರೆ ಅವರ ನಂಬಿಕೆ, ಅವರ ಮನಸ್ಸಿನಲ್ಲಿ ಏನಿರುತ್ತೆ ಅದನ್ನು ಮಾಡೋಕೆ ಸ್ವಾತಂತ್ರ್ಯ ಕೊಡಿ,' ಎಂದು ಒತ್ತಾಯಿಸಿದರು.

ಪಿಎಫ್‌ಐ ನಿಷೇಧಕ್ಕೆ ಕೇಂದ್ರ ಸರ್ಕಾರ ಕೊಟ್ಟ ಕಾರಣಗಳೇನು?

ಒಂದೆರಡು ಸಂಘಟನೆ ಬ್ಯಾನ್‌ ಮಾಡಿ, ಉಳಿದವುಗಳನ್ನು ಹಾಗೆಯೇ ಬಿಡುವುದರಿಂದ ಸಮಾಜದಲ್ಲಿ ಗೊಂದಲ ಸೃಷ್ಟಿ ಆಗಲಿದೆ. ಮತ್ತೆ ನೀವೇ ಬೆಂಕಿ ಹಚ್ಚೋ ಕೆಲಸ ಮಾಡಿದಂತೆ ಆಗುತ್ತದೆ. ಕೇವಲ ಪಿಎಫ್‌ಐ, ಎಸ್‌ಡಿಪಿಐ ಬ್ಯಾನ್‌ ಮಾಡಿದ್ರೆ ಅವರು ಸುಮ್ಮನೆ ಇರ್ತಾರಾ, ಬೇರೆಯವರನ್ನೂ ನಿಷೇಧಿಸಿ ಅಂತಾರೆ. ಇಂಥ ವಿಷಯದಲ್ಲಿ ಸರಕಾರ ಸರಿಯಾದ ನಿರ್ಧಾರ ಮಾಡಬೇಕು. ಬ್ಯಾನ್‌ಗೂ ಮೊದಲು ಸರ್ವ ಪಕ್ಷ ಸಭೆ ಕರೆದು, ಪಿಎಫ್‌ಐ ಸಂಘಟನೆಯಿಂದ ಸಮಸ್ಯೆ ಏನಿದೆ, ಏನು ತಪ್ಪಾಗಿದೆ ಎಂಬುದನ್ನು ಹೇಳಬೇಕಿತ್ತು,' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

'ಪಿಎಫ್‌ಐನವರು ಭಯೋತ್ಪಾದನೆ ಕೃತ್ಯಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದು ಕೆಲ ಸಚಿವರು, ಶಾಸಕರು ಹೇಳುತ್ತಿದ್ದಾರೆ. ಅದಕ್ಕೆ ಸೂಕ್ತ ದಾಖಲೆಯನ್ನು ಜನರ ಮುಂದಿಟ್ಟು ಯಾರನ್ನಾದರೂ ಬ್ಯಾನ್‌ ಮಾಡಿ, ಬೇಡ ಎನ್ನುವುದಿಲ್ಲ, ನಾಳೆ ಆರ್‌ಎಸ್‌ಎಸ್‌ ಬ್ಯಾನ್‌ ಮಾಡುವಿರೋ, ಪಿಎಫ್‌ಐ ಬ್ಯಾನ್‌ ಮಾಡ್ತೀರೊ, ಎಸ್‌ಡಿಪಿಐ ಬ್ಯಾನ್‌ ಮಾಡ್ತೀರೋ ಅದು ಸರಕಾರದ ನಿರ್ಧಾರ. ಆದರೀಗ ಜನರು ಬ್ಯಾನ್‌ ಮಾಡಲು ನೈಜ ಕಾರಣ ಏನು ಎಂದು ಕೇಳುತ್ತಿದ್ದಾರೆ. ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ, ತಪ್ಪೇ ಮಾಡದೆ ಶಿಕ್ಷೆ ಅಂದರೆ ಹೇಗೆ? ಎಂದು ಪ್ರಶ್ನಿಸುತ್ತಿದ್ದಾರೆ. ಹಾಗಾಗಿ ಸೂಕ್ತ ದಾಖಲೆ ನೀಡಿ ಜನರಿಗೆ ಅರ್ಥ ಮಾಡಿಸಿ. ಸರ್ವ ಪಕ್ಷಗಳ ಸಭೆ ಮುಂದೆ ಎಲ್ಲವನ್ನೂ ಹೇಳಿ,' ಎಂದರು. ಬಂಧಿತ PFI ನಾಯಕರೆಲ್ಲರೂ ಘಟಾನುಘಟಿಗಳೇ! ಸುಶಿಕ್ಷಿತರು, ಸ್ಥಿತಿವಂತರೇ ಜೈಲು ಪಾಲು

'ಖಂಡಿತಾ ಇದು ದುಡುಕಿನ ನಿರ್ಧಾರ, ಮಾತ್ರವಲ್ಲ ರಾಜಕೀಯ ಲಾಭಕ್ಕಾಗಿ ಮಾಡಿರೋ ಕ್ರಮ. ಪಿಎಫ್‌ಐ ಸಂಘಟನೆ ನಿನ್ನೆ ಮೊನ್ನೆಯದಲ್ಲ.ಹಲವು ವರ್ಷಗಳಿಂದ ಇದೆ.

ಹಿಂದೆಯೇ ನಿಷೇಧಿಸಬೇಕಿತ್ತು. ಅದನ್ನು ಬಿಟ್ಟು ಚುನಾವಣೆ ಸನಿಹದಲ್ಲಿ ಏಕೆ ಮಾಡಿದ್ದಾರೆ. ಇದು ಚುನಾವಣೆ ಗಿಮಿಕ್‌ ಅಷ್ಟೆ. ಇದು ಶಾಶ್ವತ ಅಲ್ಲ, ಹೀಗೆ ಮಾಡಿದ್ರೆ ನಾವೇ ಸಮಾಜದಲ್ಲಿ ಒಡಕು ಮೂಡಿಸಿದಂತೆ ಆಗುತ್ತದೆ. ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲನೆ ಮಾಡಲಿ. ಎಲ್ಲಾ ಸಿಎಂಗಳು ತಮ್ಮ ರಾಜ್ಯದಿಂದ ಕೇಂದ್ರಕ್ಕೆ ಮನವಿ ಮಾಡಲಿ. ಸದನದಲ್ಲಿ ನಾನೂ ಕೂಡ ಈ ಬಗ್ಗೆ ದನಿ ಎತ್ತುವೆ,' ಎಂದು ಹೇಳಿದರು.

ರಾಜ್ಯ ಸರಕಾರದ ಮೇಲೆ 40 ಪರ್ಸೆಂಟ್‌ ಕಮಿಷನ್‌ ಆರೋಪದ ಬಗ್ಗೆ ನಾನಾಗಲಿ, ಕುಮಾರಣ್ಣ ಆಗಲಿ, ರೇವಣ್ಣ ಅವರಾಗಲಿ ಮಾಡಿಲ್ಲ. ಪ್ರತಿಪಕ್ಷ ನಾಯಕ ಸಿದ್ರಾಮಣ್ಣ ಸಹ ಮಾಡಿಸಿಲ್ಲ. ಗುತ್ತಿಗೆದಾರರು ಮಾಡಿರೋ ಆರೋಪ. ಬಹಿರಂಗ ಆರೋಪದ ಹಿಂದೆ ಅಧಿಕಾರಿಗಳು ಇಲ್ಲ, ಸರಕಾರದ ತಪ್ಪಿರಬೇಕು. ಸರಕಾರ ಸರಿ ಇದ್ದರೆ ಅಧಿಕಾರಿಗಳು ಹದ್ದುಬಸ್ತಿನಲ್ಲಿ ಇರುತ್ತಿದ್ದರು. ಬೆಂಕಿ ಇಲ್ಲದೆ ಹೊಗೆ ಆಡುತ್ತಾ ಎಂದು ಪ್ರಶ್ನಿಸಿದರು.

Edited By : PublicNext Desk
PublicNext

PublicNext

01/10/2022 09:53 am

Cinque Terre

8.55 K

Cinque Terre

1

ಸಂಬಂಧಿತ ಸುದ್ದಿ