ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಗುರು ಸಿದ್ದರಾಮಯ್ಯ ಅವರಿಗೆ ತಿರುಗೇಟು ಕೊಟ್ಟ ಒಂದ್ ಕಾಲದ ಪರಮ ಶಿಷ್ಯ MTB !

ದೇಶಾದ್ಯಂತ ಕೊರೊನಾ 3ನೇ ಅಲೆ ವೇಳೆ 4,340 ಕುಟುಂಬಗಳಲ್ಲಿ ತಂದೆ,ತಾಯಿ ಇಬ್ಬರು ಸಾವನ್ನಪ್ಪಿದ್ದರು. ಪ್ರಧಾನಿ ನರೇಂದ್ರ ಮೋದಿಯವರ ಅಣತಿಯಂತೆ ದೇಶಾದ್ಯಂತ ಕೊರೊನಾದಿಂದ ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು

ಅನಾಥರಾಗಿರುವ 4,340 ಮಕ್ಕಳಿಗೆ ವಿಶೇಷ ಅನುಧಾನ ನೀಡಲಾಗ್ತಿದೆ.

ಬಾಲಕರಿಗೆ 5 ಲಕ್ಷ, 18 ವರ್ಷದೊಳಗಿನವರಿಗೆ 10 ಲಕ್ಷ ಹಣ ನೇರವಾಗಿ ಅನಾಥರಾಗಿರುವವರ ಖಾತೆಗೆ ಜಿಲ್ಲಾಧಿಕಾರಿ ಮೂಲಕ ಸಂದಾಯ ಆಗ್ತದೆ. ಹಣ ಪಡೆದುಕೊಂಡವ್ರು 23 ವರ್ಷಕ್ಕೆ ಬಂದ ನಂತರ ಅವರ ನೇರ ಖಾತೆಗೆ ಆಗುವಂತಹ ವ್ಯವಸ್ಥೆನ ಸರ್ಕಾರ ಮಾಡಿದೆ. ಇದರಿಂದ ದೇಶಾದ್ಯಂತ ಜೀವ ಉಳಿಸಿಕೊಂಡ ಅನಾಥರ ಬಾಳಿಗೆ ಇದು ಬೆಳಕಾಗಲಿದೆ ಎಂದು MTB ತಿಳಿಸಿದರು.

ಇದೇ ವೇಳೆ ಪೌರಾಡಳಿತ ಸಚಿವ MTB ನಾಗರಾಜ್, ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕರಿಗೆ ಟಾಂಗ್ ಕೊಡುವುದನ್ನ ಮರೆಯಲಿಲ್. ಈ ಹಿಂದೆ ಸಿದ್ದರಾಮಯ್ಯನವರ ಪರಮಶಿಷ್ಯನಾಗಿದ್ದ MTB ನಾಗರಾಜ್, ಬದಲಾದ ಸ್ಥಿತಿಯಲ್ಲಿ ಗುರುಗೆ ಈಗ ತಿರುಮಂತ್ರ ಹಾಕಿದ್ದಾರೆ‌. ವಿರೋಧ ಪಕ್ಷದವರು ಅವರ ಕೆಲಸ ಮಾಡಲಿ. ನಾವು ನಮ್ಮ ಕೆಲಸ ಮಾಡ್ತೇವೆ. ಮಾಧ್ಯಮದವರು ನೀವು ನಿಮ್ಮ ಕೆಲಸ ಮಾಡಿ ಎಂದು MTB ನಗುನಗುತ್ತಲೇ ಎಲ್ಲರ ಕಾಳೆದರು.

ಇಂದು ದೇಶಾದ್ಯಂತ ಪ್ರಧಾನಮಂತ್ರಿಗಳ P.M.Care's ನಿಂದ 4,340 ಅನಾಥ ಮಕ್ಕಳಿಗೆ ಆಯಾ‌ ಜಿಲ್ಲಾಧಿಕಾರಿಗಳ ಮೂಲಕ ಹಣ ಸಂದಾಯವಾಗಲಿದ್ದು, ಇದು ಅನಾಥರಾಗಿದ್ದ ಮಕ್ಕಳಿಗೆ ಸ್ವಲ್ಪಮಟ್ಟಿಗಾದ್ರು ಆಸರೆಯಾಗಲಿ.

Edited By :
Kshetra Samachara

Kshetra Samachara

30/05/2022 06:32 pm

Cinque Terre

2.04 K

Cinque Terre

0

ಸಂಬಂಧಿತ ಸುದ್ದಿ