ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಬಹುಮತವಿಲ್ಲವೆಂದು ಪ್ರತಿಪಕ್ಷ ಬಿಜೆಪಿ ನಾಯಕರು, ಪುರಸಭೆ ಮುಖ್ಯಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.
ಆನೇಕಲ್ ಪುರಸಭೆ ಹಾಲಿ ಅಧ್ಯಕ್ಷ ಪದ್ಮನಾಭ 2020ರಲ್ಲಿ ಅಧಿಕಾರದ ಪಟ್ಟಕ್ಕೇರಿದರು. ಕಾಂಗ್ರೆಸ್ ನಿಂದ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಪೈಕಿ ವಾರ್ಡ್ ನಂಬರ್ 17ರಲ್ಲಿ ಶ್ರೀನಿವಾಸ್, ವಾರ್ಡ್ ನಂ. 14 ಹೇಮಲತಾ ಸುರೇಶ್ , ವಾರ್ಡ್ ನಂ. 16ರಲ್ಲಿ ಲಲಿತಾ ಲಕ್ಷ್ಮೀನಾರಾಯಣ್ ಗೆಲುವನ್ನು ಸಾಧಿಸಿದರು. ಆದರೆ, ಚುನಾವಣಾ ಆಯೋಗಕ್ಕೆ ಚುನಾವಣೆಯ ವೆಚ್ಚವನ್ನು ನೀಡದ ಹಿನ್ನೆಲೆಯಲ್ಲಿ ಈ ಮೂವರನ್ನು ಕರ್ನಾಟಕ ಪುರಸಭೆ ಕಾಯ್ದೆ 1960 (16)ಸಿ ಅನುಸಾರ ಮೂರು ವರ್ಷಗಳ ಕಾಲ ಅನರ್ಹಗೊಳಿಸಲಾಯಿತು.
ಈ ಹಿನ್ನೆಲೆಯಲ್ಲಿ ಬಹುಮತವನ್ನು ಅಧ್ಯಕ್ಷರು ಕಳೆದುಕೊಂಡ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಬಹುಮತ ಸಾಬೀತು ಪಡಿಸುವಂತೆ ಜಿಲ್ಲಾಧಿಕಾರಿಗೆ ಈ ಹಿಂದೆ ದೂರು ನೀಡಿದ್ದರು.
ಜಿಲ್ಲಾಧಿಕಾರಿ ಸೂಚನೆಯಂತೆ ಇದೇ ಮಾರ್ಚ್ 3ನೇ ತಾರೀಕಿನವರೆಗೆ ಗಡುವು ನೀಡಲಾಗಿತ್ತು. ಆದರೆ, ಇಲ್ಲಿಯವರೆಗೆ ಬಹುಮತ ಸಾಬೀತುಪಡಿಸದೆ, ಕಾನೂನು ಉಲ್ಲಂಘನೆ ಹಾಗೂ ಬೇಜವಾಬ್ದಾರಿತನದ ಉತ್ತರ ನೀಡಿರುವ ಬಗ್ಗೆ ಆನೇಕಲ್ ಪುರಸಭೆ ಭ್ರಷ್ಟಾಚಾರದ ವಿರುದ್ಧ ಪುರಸಭೆ ಕಚೇರಿ ಮುಂಭಾಗ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
Kshetra Samachara
29/03/2022 10:55 am