ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಮಾರಸ್ವಾಮಿಗಳೆ ಅದೇನ್ ಬಿಚ್ಚಿತಿರೋ ಬಿಚ್ಚಿ ನಾನೂ ನೋಡ್ತಿನಿ; ಸಚಿವ ಅಶ್ವಥನಾರಾಯಣ್ ಎದಿರೇಟು

ಚಾಪ್ಟರ್ ಮೂಲಕ ಬಿಚ್ಚಿಡುವುದಾಗಿ ಮಾಜಿ ಸಿಎಂ ಹೆಚ್‌ಡಿಕೆ ಮಾಡಿದ್ದ ಟ್ವೀಟ್ ವಿಚಾರಕ್ಕೆ ಸಚಿವ ಅಶ್ವಥ್ ನಾರಾಯಣ ಟಾಂಗ್ ಕೊಟ್ಟಿದ್ದಾರೆ. ಕುಮಾರಸ್ವಾಮಿ ಗಾಳಿಯಲ್ಲಿ ಗುಂಡು ಹಾರಿಸೋದ್ರಲ್ಲಿ ನಿಸ್ಸೀಮರು. ಎಲ್ಲರ ಜೊತೆ ಆಟ ಆಡಿದ ಹಾಗೇ ನನ್ನ ಜೊತೆಗೆ ಆಟ ಆಡ್ಬೇಡಿ. ನನ್ನ ಜೊತೆ ಆಟ ಆಡಿದ್ರೆ, ಫೇಲ್ಯೂರ್ ಆಗ್ತೀಯಾ ಎಂದು ಕುಮಾರಸ್ವಾಮಿಗೆ ಏಕವಚನದಲ್ಲೇ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.

ಅದ್ಯಾವುದೋ ಬಿಚ್ಚಿ ಇಟ್ಟ ಹಾಗೇ ಅಲ್ಲ. ಅದೇನ್ ಬಿಚ್ಚಿಡ್ತಿರೋ ಬಿಚ್ಚಿಡಿ . ಮಿಸ್ಟರ್ ಬ್ಲಾಕ್ ಮೇಲರ್ ಅದೇನು ಬಿಚ್ಚಿಡ್ತೀಯೋ ಬಿಚ್ಚಿಡಪ್ಪಾ. ಅದೆಲ್ಲೋ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಬಿಚ್ಚಿಡ್ತಾ ಇದ್ಯಲ್ಲಪ್ಪಾ. ಎಲ್ಲೇಲ್ಲೋ ಆಟ ಆಡಿದ ಹಾಗೆ ಇಲ್ಲಿ ಆಡಲು ಆಗಲ್ಲ. ನಮ್ಮದು ಕುಟುಂಬ ಆಧಾರಿತ ಪಕ್ಷ ಅಲ್ಲ. ಸುಮ್ಮನೆ ಬಿಚ್ಚಡ್ತೀನಿ ಬಿಚ್ಚಿಡ್ತೀನಿ ಅಂದ್ರೆ ಇಲ್ಲಿ ನಡೆಯಲ್ಲ. ನಿಮ್ಮ ಹಾಗೆ ನಮ್ಮಲ್ಲಿ ಯಾವುದೂ ಗುಟ್ಟುಗಳಿಲ್ಲ. ಕುಮಾರಸ್ವಾಮಿಗೆ ಟ್ವೀಟ್ ಮೂಲಕ ಕಟುವಾಗಿ ಅಶ್ವಥ್ ನಾರಾಯಣ್ ಟಾಂಗ್ ನೀಡಿದ್ದಾರೆ.

Edited By :
PublicNext

PublicNext

10/08/2022 06:48 pm

Cinque Terre

20.25 K

Cinque Terre

1

ಸಂಬಂಧಿತ ಸುದ್ದಿ