ಬೆಂಗಳೂರು: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಶಾಂತ ತಿಮ್ಮಯ್ಯ ಅವರನ್ನು ನೂತನ ಅಧ್ಯಕ್ಷರಾಗಿ ನೇಮಿಸಲಾಗಿದೆ. ಆದ್ರೆ ಶಾಂತ ತಿಮ್ಮಯ್ಯ ಅವರ ನೇಮಕಕ್ಕೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಶಾಂತ ತಿಮ್ಮಯ್ಯ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಳಿಸಿ ಸರ್ಕಾರ ಆದೇಶ ನೀಡಿದೆ. ಈ ನೇಮಕಾತಿ ನಿಯಮಗಳ ಪ್ರಕಾರ ನಡೆದೇ ಇಲ್ಲ. ಓರ್ವ ಕನ್ಸಲ್ಟೆಂಟ್ ಆಗಿರುವ ಶಾಂತ ತಿಮ್ಮಯ್ಯ ಅವರಿಗೆ ಪರಿಸರ ವಿಷಯದಲ್ಲಿ ಬೇಕಾದ ಅರ್ಹತೆ, ನಿಪುಣತೆ, ಅನುಭವ ಇಲ್ಲ. ಹೀಗಾಗಿ ಈ ನೇಮಕಾತಿ ಪ್ರಶ್ನಿಸಿ ಕಾನೂನು ಹೋರಾಟ ಮಾಡೋದಾಗಿ ಪರಿಸರವಾದಿಗಳು ಹೇಳಿದ್ದಾರೆ.
Kshetra Samachara
15/11/2021 10:00 pm