ಬೆಂಗಳೂರು: ಪದೇ ಪದೆ ವಿದ್ಯುತ್ ದರ ಏರಿಕೆ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸುತ್ತಿರುವ ಭ್ರಷ್ಟ ಬಿಜೆಪಿ ಸರಕಾರದ ವಿರುದ್ಧ ಜನಾಂದೋಲನದ ಅಗತ್ಯವಿದೆ. ಭ್ರಷ್ಟಾಚಾರದ ಕೂಪದಲ್ಲಿ ಬಿದ್ದು ಹೊರಳಾಡುತ್ತಿರುವ ಬಿಜೆಪಿ ಆಡಳಿತ ಅಂತ್ಯವಾಗುವ ಕಾಲ ಸನ್ನಿಹಿತವಾಗಿದೆ ಎಂದು ಸಂಸದ ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಇಂದು ರಾಜರಾಜೇಶ್ವರಿ ನಗರದಲ್ಲಿ ಜ್ಞಾನಭಾರತಿ ವಾರ್ಡ್ 48ರ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿ ಕಾವ್ಯ ರಘುಗೌಡ ಆಯೋಜಿಸಿದ್ದ ಆಟೋ ಸಮಾವೇಶಕ್ಕೆ ಚಾಲನೆ ನೀಡಿ, ಚಾಲಕರಿಗೆ ಸಮವಸ್ತ್ರ ವಿತರಿಸಿ ಮಾತನಾಡಿದರು.
ಬಿಜೆಪಿ ಸರಕಾರ, ಪೆಟ್ರೋಲಿಯಂ ಉತ್ಪನ್ನ ಸಹಿತ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಸಿ ಸಾಮಾನ್ಯ ಜನರ ಉಳಿತಾಯವನ್ನು ಜಿಎಸ್‌ಟಿ ರೂಪದಲ್ಲಿ ತನ್ನ ಜೇಬಿಗೆ ತುಂಬಿಕೊಳ್ಳುತ್ತಿದೆ. ಶೇ. 40ರಷ್ಟು ಲಂಚ ತೆಗೆದುಕೊಳ್ಳುತ್ತಿರುವ ರಾಜ್ಯ ಸರಕಾರ, ವಿದ್ಯುತ್ ಬೆಲೆ ಏರಿಸುವ ಮೂಲಕ ಇನ್ನಷ್ಟು ಹೊರೆಯನ್ನು ಬಡವರ ಮೇಲೆ ಹಾಕಿದೆ.
ಆಟೋ ಮೀಟರ್ ದರವನ್ನು ಜಾಸ್ತಿ ಮಾಡಲು ಸರಕಾರ ಚಿಂತನೆ ನಡೆಸುತ್ತಲೇ ಇಲ್ಲ. ಬಿಜೆಪಿ ದುರಾಡಳಿತದಿಂದ ಜನರು ಬೇಸತ್ತು ಹೋಗಿದ್ದು, ಜನಾಂದೋಲನದ ಅತ್ಯಗತ್ಯವಿದೆ ಎಂದು ಹರಿಹಾಯ್ದರು.
PublicNext
25/09/2022 08:11 am