ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚ ಆರೋಪ ಪ್ರಕರಣ; ಬಿಇಓ ಪ್ರತಿಕ್ರಿಯೆ

ಆನೇಕಲ್ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಪ್ರೌಢ ಶಿಕ್ಷಣ ಮಟ್ಟದಲ್ಲಿ ಆರ್ ಆರ್ ರಿನಿವಲ್ ಮಾಡಿಕೊಡಲು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ ಅಂತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆನೇಕಲ್ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ರಮೇಶ್ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ

ಆನೇಕಲ್ ತಾಲ್ಲೂಕಿನ ಆರ್ ಆರ್ (ಪ್ರೌಢ ಶಿಕ್ಷಣ ಇಲಾಖೆಯ ಮಟ್ಟದಲ್ಲಿ ನಡೆಯುವ ರಿನಿವಲ್ ಲೆಟರ್) ಕೂಡ ಹಣ ತನ್ನ ಆಪ್ತ ಇ.ಸಿ. ಓ ಮುಖಾಂತರ ಹಣ ವಸೂಲು ಮಾಡುತ್ತಿದ್ದಾರೆ ಅಂತ ಆರೋಪ ಕೇಳಿ ಬಂದಿತ್ತು.

ಈ ಹಿನ್ನಲೆಯಲ್ಲಿ ಬಿಇಒ ವಿಜಯಲಕ್ಷ್ಮಿ ಮಾತನಾಡಿ ನಮಗೆ ಯಾವುದೇ ರೀತಿ ಗಮನ ಬಂದಿಲ್ಲ ಒಂದು ವೇಳೆ ಏನಾದ್ರೂ ತೆಗೆದುಕೊಂಡಿರುವುದು ಮಾಹಿತಿ ಏನಾದರೂ ಸಿಕ್ಕರೆ ಇಲಾಖೆ ಮುಖಾಂತರ ಏನು ಕ್ರಮ ಕೈಗೊಳ್ಳಬೇಕು ಅದನ್ನ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮಿ ತಿಳಿಸಿದ್ರು..

Edited By : Nagesh Gaonkar
PublicNext

PublicNext

05/09/2022 08:49 pm

Cinque Terre

29.85 K

Cinque Terre

0

ಸಂಬಂಧಿತ ಸುದ್ದಿ