ಬೆಂಗಳೂರು : ನಗರದ ಮಡಿವಾಳ ಕೆರೆಗೆ ಹೊಸದಾದ ಸಂಕಷ್ಟ ಶುರುವಾಗಿದೆ, ತನ್ನ ಮಡಿಲಲ್ಲಿರುವ ನೂರಾರು ಪಕ್ಷಿಗಳು ಮತ್ತು ಮೀನುಗಳು ಸಾಯುವ ಭೀತಿಯಲ್ಲಿದೆ.
ಹೌದು ! ಇದಕ್ಕೆಲ್ಲ ಕಾರಣವಾಗಿದ್ದು ಬಿಬಿಎಂಪಿ ಮಾಸ್ಟರ್ ಮೈಂಡ್ ಇಂಜಿನಿಯರ್ಗಳು. ಕೆರೆಯ ಬದಿಯಲ್ಲಿ ಲೇಔಟ್'ಗಳನ್ನು ಕಟ್ಟಿ ಮಳೆ ಬಂದಾಗ ನೀರು ನಿಲ್ಲುತ್ತದೆ ಅಂತ ಪಕ್ಕದಲ್ಲಿದ್ದ ರಾಜಕಾಲುವೆ ತಡೆಗೋಡೆ ಒಡೆದು ದಿನನಿತ್ಯದ ರಾಜಕಾಲುವೆಯ ಚರಂಡಿ ನೀರನ್ನು ಕೆರೆಗೆ ಬಿಟ್ಟಿದ್ದಾರೆ.
ಇದರಿಂದ ಕೆರೆಯಲ್ಲಿನ ನೀರು ವಾಸನೆ ಬರುತ್ತಿದ್ದು ಮತ್ತು ಅಲ್ಲಲ್ಲಿ ಮೀನುಗಳು ಸತ್ತು ಬಿದ್ದಿರುವ ದೃಶ್ಯಗಳು ಕಂಡು ಬರುತ್ತಿವೆ. ಇದಕ್ಕೆಲ್ಲ ಕಾರಣವಾಗಿದ್ದು ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿತನ. ಸದ್ಯದ ಮಡಿವಾಳ ಕೆರೆಯ ಪರಿಸ್ಥಿತಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ನವೀನ ಸ್ಥಳದಿಂದ ನೀಡಿರುವ ವರದಿ ನೋಡೋಣ ಬನ್ನಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
16/09/2022 05:43 pm