ಬೆಂಗಳೂರು: ಇಂದು (ಸೋಮವಾರ) ಜೆಸಿಬಿಗಳ ಗರ್ಜನೆ ನಗರದಲ್ಲಿ ಸ್ವಲ್ಪ ಕಮ್ಮಿಯಾಗಿತ್ತು. ಅದರಲ್ಲೂ ಇಂದಿನಿಂದ ಜೆಸಿಬಿಗಳು ದೊಡ್ಡವರ ಮನೆಗಳ ಮೇಲೆ ಕೈ ಇಡಬೇಕಾಗಿತ್ತು. ಆದರೆ ಬೆಳಗ್ಗೆಯಿಂದ ಸೈಲೆಂಟಾಗಿದ್ದ ಅಧಿಕಾರಿಗಳು ಸಂಜೆ ಆಗುತ್ತಿದ್ದಂತೆ ಪೊಲೀಸರ ಜೊತೆ ಬಂದು ಅಪಾರ್ಟ್‌ಮೆಂಟ್‌ಗಳು ಮಾಡಿರುವ ಒತ್ತುವರಿ ತೆರವು ಮಾಡುವ ಕಾರ್ಯ ಆರಂಭಿಸಿದರು.
ಹೌದು. ಸರ್ಜಾಪುರ ರಸ್ತೆಯ ಗ್ರೀನ್ ಉಡ್ ರಿಜೆನ್ಸಿ ಅಪಾರ್ಟ್‌ಮೆಂಟ್ ರಾಜಕಾಲುವೆ ಒತ್ತುವರಿ ಮಾಡಿದ್ದ ಜಾಗವನ್ನು ತೆರವು ಮಾಡುವ ಕಾರ್ಯ ಆರಂಭಿಸಿದರು. ಆದರೆ ಬೆಳಗ್ಗೆಯಿಂದ ಸುಮ್ಮನೆ ನಿಂತಿದ್ದ ಜೆಸಿಬಿಗಳು ಸಂಜೆ ಮೇಲೆ ಕೆಲಸ ಆರಂಭ ಮಾಡಿದ್ರಾ ಎನ್ನುವ ಅನುಮಾನ ಈಗ ಜನರಲ್ಲಿ ಮೂಡಿದೆ. ಈ ಅಪಾರ್ಟ್‌ಮೆಂಟ್ ರಾಜ್ಯ ಕಾಲುವೆಯನ್ನು ಒತ್ತುವರಿ ಮಾಡಿರುವ ತೆರವು ಕಾರ್ಯಾಚರಣೆ ನಾಳೆ ಕೂಡ ಆರಂಭ ಮಾಡುತ್ತಾರಾ ಅಥವಾ ಪ್ರಭಾವಿ ವ್ಯಕ್ತಿಗಳಿಗೆ ಶರಣಾಗಿ ಬಿಡುತ್ತಾರಾ ಕಾದು ನೋಡಬೇಕಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
20/09/2022 12:01 pm