ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ ಸುಮಾರು 23 ಲಕ್ಷ ವೆಚ್ಚದಲ್ಲಿ ಗ್ರಾಮಸ್ಥರೇ ಸೇರಿ ಕಟ್ಟಿದ ಅವಳಿ ನೂತನ ಶಾಲಾ ಕಟ್ಟಡವನ್ನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಉದ್ಫಾಟಿಸಿದರು.
ಇದೇ ವೇಳೆ ವೇದಿಕೆಯಲ್ಲಿ ಮಾತನಾಡಿದ ಶಿಕ್ಷಣ ಸಚಿವರು, ಭಾರತದಲ್ಲಿ ಮತ್ತು ಪ್ರಪಂಚಾದ್ಯಂತ ಜ್ಞಾನಕ್ಕೆ ಮಹತ್ವ ನೀಡಿರುವುದು, ಪರಕೀಯರ ದಾಳಿ ಸಹ ಜ್ಞಾನಕ್ಕಾಗಿ ನಡೆದಿದ್ದು. ಜ್ಞಾನದ ಜೊತೆಗೆ ವ್ಯಾಪಾರಕ್ಕೆ ಆಗಮಿಸಿದ್ದರು.
ಮೆಕಾಲೆ ಶಿಕ್ಷಣ ಪದ್ದತಿಯನ್ನು ಅನುಸರಿಸಿದ್ದು ಸರಿಯಿಲ್ಲಾ, ಶಿಕ್ಷಣ ಪದ್ದತಿ ಬದಲಾಯಿಸಲು ಹಲವರು ಹೋರಾಟ ನಡೆಸಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಪ್ರಸಕ್ತ ವರ್ಷದಲ್ಲಿ 8600 ನೂತನ ಶಾಲಾ ಕಟ್ಟಡ ಹಾಗೂ 15000 ಶಿಕ್ಷಕರನ್ನು ನೇಮಕಾತಿ ಪ್ರಕ್ರಿಯೆ ಒಂದೆರೆಡು ತಿಂಗಳಲ್ಲಿ ಮುಕ್ತಾಯಗೊಳ್ಳಲಿದೆ.
ಈ ವರ್ಷ ಕಲಿಕಾ ಚೇತರಿಕಾವಾದದ್ದು, ಗುಣಮಟ್ಟದ ಶಿಕ್ಷಣ ಹಾಗೂ ಆರೋಗ್ಯಕ್ಕೂ ಒತ್ತು ನೀಡುತ್ತಿದ್ದೇವೆ, ಊರಿನ ದಾನಿಗಳೇ ಸೇರಿ ಶಾಲಾ ಕಟ್ಟಡ ಕಟ್ಟಿಸಿ, ನಮ್ಮೂರ ಶಾಲೆ ಉಳಿಸಬೇಕೆಂದು ಪಣ ತೊಟ್ಟಿರುವ ಯುವಕರ ತಂಡಕ್ಕೆ ಅಭಿನಂದನೆ ತಿಳಿಸಿದರು. ಕೋವಿಡ್ ನಿಂದ ನ್ಯೂನ ಪೋಷಣೆ ಒಳಾಗದ ಮಕ್ಕಳಿಗೆ ಹಾಲು, ಮೊಟ್ಟೆ, ಚಿಕ್ಕಿ ನೀಡುತ್ತಿದ್ದೇವೆ.
ರಾಜ್ಯದಲ್ಲಿ 247 ಕೆಪಿಎಸ್ ಶಾಲೆಗಳಿವೇ, ಹೊಸ ಕೆ.ಪಿ.ಎಸ್. ಶಾಲೆ ತೆರೆಯಲ್ಲಾ, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡುವುದಕ್ಕೆ ಒತ್ತು ನೀಡುತ್ತೇವೆ. ಪಿ.ಯು.ಸಿ. ಪರೀಕ್ಷೆಯಲ್ಲಿ ಮರು ಮೌಲ್ಯಮಾಪನದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಪಂಚಾಯತಿಗೊಂದು ಮಾದರಿ ಶಾಲೆ ನಿರ್ಮಾಣ ಮಾಡುವುದು, ತಾಲೂಕಿಗೆ ಒಂದೊಂದು ನಿರ್ಮಾಣ ಮಾಡುವ ಗುರಿ ಹೊಂದಿದೆ. ಇಂಗ್ಲೀಷ್ ಭಾಷೆಗೆ ಒತ್ತು ನೀಡಲಿದ್ದೇವೆ, ಕೆಂಗಲ್ ಕೆಂಪೋಹಳ್ಳಿ ಗ್ರಾಮದಲ್ಲಿ 26 ವಿದ್ಯಾರ್ಥಿಗಳಿಗೆ ಎರಡು ಶಾಲೆ ನಿರ್ಮಾಣ ಉತ್ತಮ ಬೆಳವಣೆಗೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.
PublicNext
02/08/2022 10:54 pm