ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈದ್ಗಾ ಮೈದಾನದಲ್ಲಿ ಯೋಗ ದಿನಾಚರಣೆ ಅನುಮತಿಗೆ ಬಿಬಿಎಂಪಿ ಮೀನಾಮೇಷ

ಬೆಂಗಳೂರು: ನಗರದ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದೆ. ಮೈದಾನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಗೆ ಒಪ್ಪಿಗೆ ನೀಡುವಂತೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮನವಿ ಮಾಡಿದ್ದು, ಅನುಮತಿಗಾಗಿ ಮತ್ತಷ್ಟು ದಿನ ಕಾಲಾವಕಾಶ ನೀಡುವಂತೆ ಸಂಘಟನೆಗಳಿಗೆ ಬಿಬಿಎಂಪಿ ಮನವಿ ಮಾಡಿದೆ.

ಈ ಬಗ್ಗೆ ಮಂಗಳವಾರ ಮಹತ್ವದ ಸಭೆ ನಡೆದಿದ್ದು,ಮೂಲ ದಾಖಲೆಗಳ ಪರಿಶೀಲನೆಗೆ ಬಿಬಿಎಂಪಿ ಅಧಿಕಾರಿ ಗಳು ಮುಂದಾಗಿದ್ದಾರೆ.

ಸದ್ಯ ಮೈದಾನದ ವಿಚಾರದಲ್ಲಿ ಬಿಬಿಎಂಪಿ ತಟಸ್ಥ ನಿಲುವು ತಾಳಿದೆ. ಸ್ವಾತಂತ್ರ್ಯ ದಿನಾಚರಣೆ, ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ ಸೇರಿದಂತೆ ಹಲವು ಹಿಂದೂ ಆಚರಣೆಗಳಿಗೆ ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದು, ಅನುಮತಿ ನೀಡಬೇಕು ಅಥವಾ ತಿರಸ್ಕರಿಸಬೇಕು ಅದನ್ನೂ ಮಂಗಳವಾರ ಮಧ್ಯಾಹ್ನದ ಒಳಗೆ ಪ್ರಕಟಿಸಬೇಕು ಎಂದು ವಿಶ್ವ ಸನಾತನ ಪರಿಷತ್ ಪಟ್ಟು ಹಿಡಿದಿದೆ. ಇಲ್ಲದಿದ್ದರೆ ಕೋರ್ಟ್ ಮೆಟ್ಟಿಲು ಏರಲು ತೀರ್ಮಾನಿಸಿದೆ.

Edited By : Nagesh Gaonkar
PublicNext

PublicNext

15/06/2022 08:02 am

Cinque Terre

40.98 K

Cinque Terre

0

ಸಂಬಂಧಿತ ಸುದ್ದಿ