ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಶಾ' ಭೇಟಿ ಅಮಿತ ಕುತೂಹಲ ಸಂಪುಟ ಪುನಾರಚನೆ ಆಗುತ್ತಾ, ಸರ್ಕಾರವೇ ಬದಲಾಗುತ್ತಾ?

ಬೆಂಗಳೂರು: ಕೇಂದ್ರ ಗೃಹ ಸಚಿವ, ಬಿಜೆಪಿ ವರಿಷ್ಠ ಅಮಿತ್ ಶಾ ಅವರ ಕರ್ನಾಟಕದ ಭೇಟಿಯು ತೀವ್ರ ಕುತೂಹಲ ಮೂಡಿಸಿದೆ.

ಬೆಂಗಳೂರಲ್ಲಿ ಮೇ 2ರಂದು ನಡೆಯಲಿರುವ ಖೇಲೋ ಇಂಡಿಯಾ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಮುನ್ನ ಅಥವಾ ನಂತರ ಮತ್ತೊಮ್ಮೆ ಕೋರ್‌ ಕಮಿಟಿ ಸಭೆಯ ಜೊತೆಗೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಸಂಘಟನೆಗೆ ಸಂಬಂಧಿಸಿದಂತೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎನ್ನಲಾಗಿದೆ.

ವಿಧಾನಸಭಾ ಚುನಾವಣೆಗೆ ಇನ್ನು 10ರಿಂದ 11 ತಿಂಗಳು ಬಾಕಿ ಇರುವ ಸಂದರ್ಭದಲ್ಲಿ ಸಚಿವ ಸಂಪುಟ ಪುನರ್ರಚನೆಯ ಚರ್ಚೆ, ಸರ್ಕಾರವೇ ಬದಲಾಗುತ್ತಾ ಅನ್ನುವ ಚರ್ಚೆ ಎದ್ದಿದೆ. ಈ ಹೊತ್ತಿನಲ್ಲಿ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ.

Edited By :
PublicNext

PublicNext

02/05/2022 03:31 pm

Cinque Terre

17.43 K

Cinque Terre

0

ಸಂಬಂಧಿತ ಸುದ್ದಿ