ಬೆಂಗಳೂರು: ಮತ್ತೆ ಚಿರತೆ ಬರುವಂತಹ ಭಯದಲ್ಲೇ ಈ ಲೇಔಟ್‌ನ ಜನ ಇದ್ದಾರೆ. ರಾತ್ರಿಯಾದರೆ ಸಾಕು ಈ ಲೇಔಟ್ ರಸ್ತೆಗಳು ಅರಣ್ಯ ಪ್ರದೇಶ ರೀತಿ ಕತ್ತಲಾಗಿರುತ್ತದೆ.
ಬೊಮ್ಮನಹಳ್ಳಿಯ ಅಕ್ಷಯನಗರ ಲೇಔಟ್‌ನಲ್ಲಿ ಬೆಸ್ಕಾಂ ಬೀದಿ ದೀಪಗಳನ್ನು ಅಳವಡಿಸಿಲ್ಲ. ಲೇಔಟ್‌ನಲ್ಲಿ 3000ಕ್ಕೂ ಹೆಚ್ಚು ಮನೆಗಳಿದ್ದು ಇಲ್ಲಿ ಬೀದಿ ದೀಪಗಳ ಅವಶ್ಯಕತೆ ಇದೆ. ಬೆಸ್ಕಾಂ ಲೇಔಟ್‌ಲ್ಲಿ ಕೆಲವು ಕಡೆ ಮಾತ್ರ ಬೀದಿದೀಪಗಳು ಹಾಕಿ ಮುಖ್ಯರಸ್ತೆಗಳು ಮತ್ತು ಲೇಔಟ್‌ನ ಹಲವಾರು ರಸ್ತೆಗಳಲ್ಲಿ ಬೆಸ್ಕಾಮ್ ಬೀದಿದೀಪಗಳನ್ನು ಅಳವಡಿಸಿಲ್ಲ.
ಸಂಜೆಯಾದರೆ ಇಲ್ಲಿನ ನಿವಾಸಿಗಳಿಗೆ ರಸ್ತೆಯ ಮೇಲೆ ವಾಕ್ ಮಾಡಲು ಮತ್ತು ಅಂಗಡಿಗಳಿಗೆ ಹೋಗಲು ಜನರು ಕತ್ತಲಾದ ರಸ್ತೆಯಲ್ಲಿ ತೆರಳಬೇಕು. ಕೆಲವು ತಿಂಗಳ ಹಿಂದಷ್ಟೇ ಇದೇ ಲೇಔಟ್ ನ ಒಳಗೆ ಚಿರ್ತೆ ಕೂಡ ಪತ್ತೆಯಾಗಿತ್ತು ಇಷ್ಟೆಲ್ಲಾ ಆದರೂ ಸಹ ಇನ್ನೂ ಎಚ್ಚೆತ್ತುಕೊಳ್ಳದ ಬೆಸ್ಕಾಂ.
ರಾತ್ರಿಯಾದರೆ ಇಲ್ಲಿನ ನಿವಾಸಿಗಳು ಮನೆಯಿಂದ ಹೊರಬರಲು ಭಯ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ಷಯನಗರ ಲೇಔಟ್‌ನಲ್ಲಿ ಬೀದಿದೀಪಗಳು ಅಳವಡಿಸಬೇಕು.
Kshetra Samachara
29/04/2022 06:13 pm