ದೇವನಹಳ್ಳಿ: ರಾಜ್ಯಾದ್ಯಂತ ನೋಂದಣಿ & ಮುದ್ರಾಂಕ ಶುಲ್ಕದಲ್ಲಿ ಶೇ.10ರಷ್ಟು ರಿಯಾಯಿತಿಯನ್ನು ಮುಂದುವರೆಸುವುದಾಗಿ ಆರ್ .ಅಶೋಕ್ ಸ್ಪಷ್ಟಪಡಿಸಿದ್ದಾರೆ.
ರೈತರು ಮೊದಲು ತಮ್ಮ ಜಮೀನಿನ ವಿಭಾಗ ಮಾಡಿಕೊಳ್ಳಲು 11E ಸ್ಕೆಚ್ ನ ತೋರಿಸಿ ವಿಭಾಗ ಮಾಡಿಕೊಳ್ಳಬೇಕಿತ್ತು. ಈಗಾಗಲೇ ರಾಜ್ಯಾದ್ಯಂತ 2 ಲಕ್ಷ ಅರ್ಜಿಗಳು ವಿಲೇವಾರಿಯಾಗದೆ ಉಳಿದಿವೆ. ಈ ಬಗ್ಗೆ ಅನೇಕ ದೂರುಗಳು ಬಂದ ಹಿನ್ನಲೆಯಲ್ಲಿ ಕಂದಾಯ ಇಲಾಖೆ ರೈತರಿಗಾಗಿ 2 ಜನಪರ ಕಾನೂನು ಜಾರಿಗೆ ತಂದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ದೇವನಹಳ್ಳಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
ನೋಂದಣಿ & ಮುದ್ರಾಂಕ ಶುಲ್ಕಅಧಿಕವಾಗಿದ್ದರಿಂದ ಜನಸಾಮಾನ್ಯರು ಜಮೀನನ್ನು ಕೊಳ್ಳಲು ಮತ್ತು ಮಾರಲು ಪರದಾಡುವಂತಾಗಿತ್ತು. ಈ ಬಗ್ಗೆ ಜನತೆ ಇಲಾಖೆಗೆ ದೂರು ನೀಡಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. 20×30 ನಿವೇಶನ ಖರೀದಿಗೆ ಲಕ್ಷಾಂತರ ರೂ. ಖರ್ಚುಮಾಡಬೇಕಿತ್ತು. ಇದೀಗ ಸರ್ಕಾರ ಶೇ. 10ರಷ್ಟು ರಿಜಿಸ್ಟ್ರೇಷನ್ ಶುಲ್ಕ ರಿಯಾಯಿತಿ ಕೊಟ್ಟಿರುವುದು ಒಳ್ಳೆಯದೇ.
ಹಾಗೆಯೇ ಕಂದಾಯ ಇಲಾಖೆಯಲ್ಲಿ ರಾಜ್ಯಾದ್ಯಂತ 2 ಲಕ್ಷಕ್ಕೂ ಅಧಿಕ ಸರ್ವರ್ ಸ್ಕೆಚ್ ಅರ್ಜಿಗಳು ಬಾಕಿ ಉಳಿದಿವೆ. ಈ ಪ್ರಮುಖ ಎರಡೂ ಸಮಸ್ಯೆ ನಿವಾರಣೆಗೆ ಸರ್ಕಾರ ಯೋಜನೆ ರೂಪಿಸಿದೆ. ಇದೀಗ ಕಂದಾಯ ಇಲಾಖೆ ಎರಡೂ ಕಾನೂನುಗಳನ್ನು ಜಾರಿಗೊಳಿಸಿ ಆದೇಶಿಸಿದೆ ಎಂದು ಸಚಿವ ಆರ್.ಅಶೋಕ್ ದೇವನಹಳ್ಳಿಯ ವಿಭಾಗೀಯ ಕಾರ್ಯಕಾರಿಣಿಯಲ್ಲಿ ತಿಳಿಸಿದರು.
- SureshBabu 'Public Next' Devanahalli
PublicNext
21/04/2022 08:04 pm