ಭಗವದ್ಗೀತೆ ಮನುಷ್ಯನ ಕರ್ಮಫಲ. ಇದು ಜೀವನ ಪದ್ಧತಿ ತಿಳಿಸುತ್ತದೆ. ಆದರೆ ಯಾವ ಧರ್ಮದ ಬಗ್ಗೆ ಬೋಧಿಸುವುದಿಲ್ಲ. ಮನುಷ್ಯನ ಧರ್ಮ ಮತ್ತು ಕರ್ಮಗಳನ್ನು ತಿಳಿಸುತ್ತದೆ. ಮನುಷ್ಯ ಸನ್ಮಾರ್ಗದಲ್ಲಿ ನಡೆಯುವುದನ್ನ ಸೂಚಿಸುತ್ತದೆ. ಇತ್ತೀಚೆಗೆ ಆಧುನಿಕ ಜನರಲ್ಲಿ ಮಾನವೀಯತೆ ನಶಿಸಿ ಹೋಗ್ತಿದೆ. ಗುರು ಹಿರಿಯರ ಬಗ್ಗೆ ಗೌರವ ಇಲ್ಲ. ಆದ್ದರಿಂದ ಮೌಲ್ಯಗಳ ಪ್ರತಿಪಾದಕವಾಗಿರುವ ಭಗವದ್ಗೀತೆ ಗ್ರಂಥವನ್ನು ಪಠ್ಯಪುಸ್ತಕ ಮಾಡುವುದು ಒಳ್ಳೆಯದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಶ್ವನಾಥ್ ಯಲಹಂಕದಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದ ಕೆಲವು ನಾಯಕರು ಮಾತ್ರ ಪಠ್ಯ ಕ್ರಮದಲ್ಲಿ ಭಗವದ್ಗೀತೆ ಅಳವಡಿಸಲು ವಿರೋಧ ವ್ಯಕ್ತಿಪಡಿಸ್ತಿದ್ದಾರೆ. ಸಿದ್ದರಾಮಯ್ಯ ಯಾವುದೇ ಒಳ್ಳೆಯದನ್ನು ಅಳವಡಿಸಲು ವಿರೋಧ ಇಲ್ಲ ಎಂದಿದ್ದಾರೆ. ಆದರೆ ಕೆಲವು ನಾಯಕರ ಮನದಲ್ಲಿ ಭಗವದ್ಗೀತೆ ಬಗ್ಗೆ ಒಲವಿದ್ದರೂ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಭಗವದ್ಗೀತೆ ಅಳವಡಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಯಲಹಂಕದ ಶಿವಕೋಟೆ, ಸಿಂಗನಾಯಕನಹಳ್ಳಿ, ಮಾದಪನಹಳ್ಳಿ, ಲಿಂಗನಹಳ್ಳಿ, ಮುತ್ತುಕದಹಳ್ಳಿ ಮತ್ತು ಲಿಂಗರಾಜಪುರ ಗ್ರಾಮಗಳಲ್ಲಿ ಎರಡುಕೋಟಿ ಮೌಲ್ಯದ ಚರಂಡಿ, ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿ ಭಗವದ್ಗೀತೆ ಪಠ್ಯವಾಗಬೇಕು ಎಂದರು.
Kshetra Samachara
22/03/2022 01:23 pm