ಬೆಂಗಳೂರು - ಬಿಬಿಎಂಪಿ ಕಾಯ್ದೆ 2020ಕ್ಕೆ ಅನ್ವಯವಾಗುವಂತೆ ಚುನಾವಣೆ ನಡೆಸಲು ಸರ್ಕಾರ ಬಿಬಿಎಂಪಿ ನಿಯಮಗಳು 2021 ಜಾರಿಗೊಳಿಸುತ್ತಿದೆ. ಶುಕ್ರವಾರ ವಿಶೇಷ ರಾಜ್ಯಪತ್ರದ ಮೂಲಕ ಕರಡು ಪ್ರಕಟಣೆ ಹೊರಡಿಸಲಾಗಿದೆ. ಆಕ್ಷೇಪಣೆಗಳು ಇದ್ದರೇ ಡಿ.17 ರೊಳಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಪಾಲಿಕೆ ಮುಖ್ಯ ಅಯುಕ್ತರು ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡಲಿದ್ದಾರೆ. ಈ ಹಿಂದೆ ಕರ್ನಾಟಕ ಮುನ್ಸಿಪಲ್ ಕಾಯ್ದೆ 1976 ಅನ್ವಯ ಪಾಲಿಕೆ ಅಯುಕ್ತರು ಚುನಾವಣಾಧಿಕಾರಿ ಅಗಿದ್ದರು. ರಾಜ್ಯ ಚುನಾವಣೆ ಅಯೋಗ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು.
Kshetra Samachara
20/11/2021 10:33 am