ಬೆಂಗಳೂರು: ರಾಜ್ಯದ ಕರಾವಳಿಯಲ್ಲಿ ಶುರುವಾದ ಹಿಜಾಬ್ ವಿಚಾರ ಇಡೀ ರಾಜ್ಯಕ್ಕೆ ಹಬ್ಬಿದೆ. ಸದ್ಯ ಹಿಜಾಬ್ ವರ್ಸಸ್ ಕೇಸರಿ ಶಾಲು ಆಗಿ ಎಲ್ಲೆಡೆ ಬಿಸಿಬಿಸಿ ಚರ್ಚೆಯಾಗ್ತಿದೆ.
ಈ ಮಧ್ಯೆ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೊಸ ಬಾಂಬ್ ಸಿಡಿಸಿದ್ದಾರೆ. ಹಿಜಾಬ್ ಇಂದು ನಿನ್ನೆಯದ್ದಲ್ಲ. ಸಾಕಷ್ಟು ವರ್ಷಗಳಿಂದ ಹಿಜಾಬ್‌ಅನ್ನು ಮುಸ್ಲಿಂ ಹೆಣ್ಣುಮಕ್ಕಳು ಧರಿಸುತ್ತಿದ್ದಾರೆ. ಕರಾವಳಿಯಲ್ಲಿ ಶೈಕ್ಷಣಿಕ ವರ್ಷ ಕೊನೆ ಹಂತದಲ್ಲಿ ಹಿಜಾಬ್ ವಿಚಾರ ಬೆಳಕಿಗೆ ಬಂದಿದೆ. ಶೈಕ್ಷಣಿಕ ವರ್ಷದ ಮೊದಲು ಆಡಳಿತ ಮಂಡಳಿ ಏನ್ ಮಾಡ್ತಿದ್ರು ?ಮುಂದಿನ ವರ್ಷ ಚುನಾವಣೆ ಇದೆ.ಹೀಗಾಗಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಕೆಲಸಕ್ಕೂ 40%ಕಮಿಷನ್ ಕೊಡಬೇಕು, ಮೂರು ಮೂರು ಮುಖ್ಯಮಂತ್ರಿ ಬದಲಾಗಿದ್ದಾರೆ. ಚುನಾವಣೆ ದಿಕ್ಕು ತಪ್ಪಿಸಲು ಬಿಜೆಪಿ ಹಿಜಾಬ್ ವಿಚಾರ ಎತ್ತುತ್ತಿದೆ ಎಂದು ಶಾಸಕ ರಿಜ್ವಾನ್ ಗಂಭೀರವಾಗಿ ಆರೋಪಿಸಿದ್ದಾರೆ.
PublicNext
08/02/2022 09:11 pm