ಬೆಂಗಳೂರು: ಆನೇಕಲ್ ವಿಧಾನಸಭಾ ಕ್ಷೇತ್ರದ 21 ಗ್ರಾಮ ಪಂಚಾಯಿತಿಗಳಿಗೆ ತಲಾ 10 ಲಕ್ಷದಂತೆ 2.10 ಕೋಟಿ ರೂ ವೆಚ್ಚದ ಕಾಮಗಾರಿಗಳನ್ನು ನಡೆಸಲು ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ ಎಂದು ಶಾಸಕ ಶಿವಣ್ಣ ತಿಳಿಸಿದರು.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮದಲ್ಲಿ ಇಂದು 10 ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆಯನ್ನು ನೀಡಲಾಯಿತು, ಆನೇಕಲ್ ಶಾಸಕರಾದ ಶಿವಣ್ಣ, ಬ್ಯಾಗಡದೆನಹಳ್ಳಿ, ಪಂಚಾಯಿತಿ ಅಧ್ಯಕ್ಷರಾದ ವೀಣಾ ರವರು ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೆರಿಸಿದರು.
Kshetra Samachara
29/08/2022 09:06 pm