ಬೆಂಗಳೂರು: ಅಪರಚಿತನಿಂದ ಕೊಲೆ ಬೆದರಿಕೆ ಹಿನ್ನೆಲೆ ಸದಾಶಿವನಗರ ಪೊಲೀಸ್ ಠಾಣೆಗೆ ಶಾಸಕ ರೇಣುಕಾಚಾರ್ಯ ದೂರು ನೀಡಿದ್ದಾರೆ.
ಬೆಳಗ್ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆಂದು ದೂರು ನೀಡಿರೊ ರೇಣುಕಾಚಾರ್ಯ, ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ವಿಚಾರವಾಗಿ ರೇಣುಕಾಚಾರ್ಯ ಪ್ರತಿಕ್ರಿಯಿಸಿದ್ದು, ಬೆಳಿಗ್ಗೆಯಿಂದ ಕಾಲ್ ಬರ್ತಿತ್ತು ನಾನು ಹೊಸ ನಂಬರ್ ಅಂತಾ ರಿಸೀವ್ ಮಾಡಿಲಿಲ್ಲ. ನಮ್ಮ ನಾಯಕರ ಜೊತೆ ಚರ್ಚೆ, ಮಾತುಕತೆ ಮುಗಿಸಿ ಸಂಜೆ 4ಗಂಟೆಗೆ ಮನೆಗೆ ಬಂದಾಗಲೂ ಕರೆ ಬಂತು. ರಿಸೀವ್ ಮಾಡಿದಾಗ ಅವಾಚ್ಯ ಶಬ್ದಗಳಿಂದ ಮಾತನಾಡ್ತಿದ್ದ.
'ನೀನು ಮುಸ್ಲಿಂರ ಬಗ್ಗೆ ಮಾತನಾಡ್ತೀಯಾ, ಹಿಜಾಬ್, ಹಲಾಲ್ ಕಟ್ ಬಗ್ಗೆ ಮಾತನಾಡ್ತೀಯಾ ಮೂರ್ನಾಲ್ಕು ದಿನದಲ್ಲಿ ನಿನ್ನ ಮುಗಿಸ್ತೀನಿ' ಅಂತಾ ಬೆದರಿಕೆ ಹಾಕಿದ್ದಾನೆ. ಈ ವಿಚಾರವಾಗಿ ಸದಾಶಿವನಗರ ಪೊಲೀಸರಿಗೆ ದೂರು ನೀಡಿರೋದಾಗಿ ಶಾಸಕ ರೇಣುಕಾಚಾರ್ಯ ಹೇಳಿದ್ರು.
PublicNext
30/03/2022 09:08 pm