ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ಮಕ್ಕಳ ಅಂಗನವಾಡಿ ಜಾಗದಲ್ಲಿ ರಾಜಕೀಯ ಜಟಾಪಟಿ

ಆನೇಕಲ್: ಮಕ್ಕಳ ಅಂಗನವಾಡಿ ಜಾಗದ ವಿಚಾರಕ್ಕೆ ಕಾಂಗ್ರೆಸ್ ಹಾಗು ಬಿಜೆಪಿ ನಡುವೆ ಕೂಗಾಟ ಚೀರಾಟ ಗದ್ದಲ ಕೋಲಾಹಲ ನಡೆದಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಡಿಜಿಟಲ್ ಲೈಬ್ರರಿ ಹಾಗೂ ರೆಕಾರ್ಡ್ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮಕ್ಕೆ ಶಾಸಕ ಬಿ ಶಿವಣ್ಣ ಭೇಟಿ ನೀಡಿದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಅಂಗನವಾಡಿ ಜಾಗದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಮರಸೂರು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜೆಆರ್ ಕೋಕನಟ್ ಬಡಾವಣೆಯಲ್ಲಿ ಸಿಎ ಸೈಟ್ ಇತ್ತು. ಆ ಜಾಗದಲ್ಲಿ ಅಂಗನವಾಡಿ ಕಟ್ಟಲು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಂದಾಗಿದ್ದರು.

ಆದರೆ ಈಗ ಆ ಜಾಗದಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷರು ಅಧಿಕಾರಿಗಳ ಜೊತೆ ಶಾಮೀಲಾಗಿ ಜಾಗ ಮಾರಾಟ ಮಾಡಿಕೊಳ್ಳಲು ಹೊರಟಿದೆ ಎನ್ನಲಾಗಿದೆ. ಈ ಜಾಗ ಬೆಲೆ ಬಾಳುವಂತದ್ದು. ಅವರಿಗೆ ಬೇರೆ ಕಡೆ ಕಡಿಮೆ ವೆಚ್ಚದಲ್ಲಿ ಜಾಗ ನೀಡಲು ಪಂಚಾಯಿತಿ ಅಧ್ಯಕ್ಷರು ಮುಂದಾಗಿದ್ದಾರೆ ಎಂಬ ಗಂಭೀರವಾದ ಆರೋಪ ಕೇಳಿಬಂದಿದೆ. ಜೊತೆಗೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಉದ್ಘಾಟನೆಯಾದ ಕಟ್ಟಡಗಳನ್ನು ಮತ್ತೊಮ್ಮೆ ಕೇಂದ್ರ ಸಚಿವರನ್ನು ಕರೆಸಿ ಪೂಜೆ ಮಾಡಲು ಪ್ಲಾನ್ ಮಾಡಿದ್ದಾರೆ. ಇದು ಶೋಭೆ ತರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Edited By : Shivu K
Kshetra Samachara

Kshetra Samachara

03/03/2022 10:17 pm

Cinque Terre

2.52 K

Cinque Terre

0

ಸಂಬಂಧಿತ ಸುದ್ದಿ