ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬದ ಮೊಮ್ಮಗಳು ಸಾವಿನ ನಿರ್ಧಾರಕ್ಕೆ ಬಂದು ತನ್ನ ಕುಟುಂಬಕ್ಕೆ ನಿಜಕ್ಕೂ ಶಾಕ್ ನೀಡಿದ್ದಾಳೆ.
ಬಿಎಸ್ ಯಡಿಯೂರಪ್ಪನವರಿಗೆ ಈ ವಯಸ್ಸಿನಲ್ಲಿ ಈ ಒಂದು ಆಘಾತವೇ ಸರಿ. ನಿಜ, ಬಿಎಸ್‌ವೈ ಮೊಮ್ಮಗಳು ಸೌಂದರ್ಯ, ಇಂದು ಬೆಳಿಗ್ಗೆ ವಸಂತನಗರದ ಅಪಾರ್ಟ್ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಕೆಲಸದಾಕೆ ತಿಂಡಿ ಕೊಡಲು ಹೋದಂತಹ ಸಂದರ್ಭದಲ್ಲಿ ಈ ಒಂದು ವಿಚಾರ ಹೊರ ಬಿದ್ದಿದೆ.
ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ನೀರಜ್ ಅವರನ್ನ ಯಡಿಯೂರಪ್ಪನವರ ಕೊನೆಯ ಮಗಳು ಪದ್ಮಾರವರ ಪುತ್ರಿ ಸೌಂದರ್ಯ ಮದುವೆಯಾಗಿದ್ರು. ದಂಪತಿಗೆ 9 ತಿಂಗಳ ಮಗು ಕೂಡ ಇತ್ತು.ಒಂದೊಳ್ಳೆ ಕುಟುಂಬದಿಂದ ಬಂದಂತಹ ಇಬ್ಬರ ನಡುವೆ ಯಾವುದೇ ಕಲಹ ಇರಲಿಲ್ಲ.
ಆದರೆ ಇತ್ತೀಚೆಗೆ ಮಗುವಿನ ನಾಮಕರಣದ ಬಳಿಕ ದಂಪತಿಯ ನಡುವೆ ಕೆಲವೊಂದು ಭಿನ್ನಾಭಿಪ್ರಾಯಗಳು ವ್ಯಕ್ತವಾಗಿದೆ. ಒಂದು ವಾರದ ಈ ಸಮಸ್ಯೆಯಿಂದಾಗಿ ನೊಂದ ಸೌಂದರ್ಯ, ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಅನುಮಾನಿಸಲಾಗಿದೆ.
ಬೆಳಗಿನ ಜಾವ ಎಂದಿನಂತೆ ನೀರಜ್, ಎಂಎಸ್ ರಾಮಯ್ಯ ಆಸ್ಪತ್ರೆಗೆ ಕೆಲಸಕ್ಕೆಂದು ತೆರಳಿದ್ದಾರೆ.ಅಪಾರ್ಟ್ಮೆಂಟ್ ನಲ್ಲಿ ದಂಪತಿ ಬಿಟ್ಟರೆ ಕೆಲಸದಾಕೆ ಮಾತ್ರ ಇರುತ್ತಿದ್ದಳು. ಇಂದು ಪತಿ ಹೊರ ಹೋದ ಬಳಿಕ ಮಗುವನ್ನ ಮತ್ತೊಂದು ಕೊಠಡಿಯಲ್ಲಿ ಮಲಗಿಸಿ ಕೋಣೆ ಸೇರಿಕೊಂಡ ಸೌಂದರ್ಯ, ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ತಿಂಡಿ ಕೊಡಲು
ಕೆಲಸದಾಕೆ ರೂಂಗೆ ಹೋದಾಗ ಬಾಗಿಲು ತೆರೆಯದ ಹಿನ್ನೆಲೆ ತಕ್ಷಣ ನೀರಜ್ ಅವರಿಗೆ ಕರೆ ಮಾಡಿದ್ದಾರೆ. ಪತಿ ಬಂದು ರೂಮಿನ ಬಾಗಿಲು ಒಡೆದು ನೋಡಿದಾಗ ಪತ್ನಿ ನೇಣಿಗೆ ಶರಣಾಗಿದ್ದರು ಎಂದು ಪೊಲೀಸ್ರಿಗೆ ತಿಳಿಸಿದ್ದಾರೆ.
ಹೆಸರುಘಟ್ಟದ ಬಳಿ ಇರುವ ಫಾರ್ಮ್ ಹೌಸ್ ನಲ್ಲಿ ಸೌಂದರ್ಯ ಅವರ ಅಂತ್ಯಕ್ರಿಯೆ ನಡೆದಿದೆ. ಇನ್ನು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯೂಡಿಆರ್ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.
PublicNext
28/01/2022 05:59 pm