ಬೆಂಗಳೂರು: ಕೊರೊನ ನಿಯಮ ಉಲ್ಲಂಘನೆ ಹಿನ್ನೆಲೆ ಬಿಜೆಪಿ ಮುಖಂಡ ಎನ್ ಆರ್ ರಮೇಶ್ ವಿರುದ್ದ ಎರಡನೇ ಎಫ್ ಐ ಆರ್ ದಾಖಲಾಗಿದೆ.
ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ಎನ್ ಆರ್ ರಮೇಶ್ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಜನವರಿ 14 ರಂದು ರಾಯಪುರ ವಾರ್ಡ್ ನ ಬಿಬಿಎಂಪಿ ಕಟ್ಟಡದಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಣೆ ಮಾಡಿಕೊಂಡಿದ್ದ ಎನ್ ಆರ್ ರಮೇಶ್, ಕೋವಿಡ್ ನಿಯಮ ಉಲ್ಲಂಘಿಸಿ ಸಾಕಷ್ಟು ಜನ ಸೇರಿಸಿ ಬರ್ತಡೇ ಮಾಡಿಕೊಂಡಿದ್ದ ಎನ್ ಆರ್ ರಮೇಶ್ ಈ ಹಿನ್ನೆಲೆ ಜಗಜೀವನ್ ರಾಮ್ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಾಲು ಮಾಡಿದ್ದಾರೆ.
ಈ ಹಿಂದೆ ಮನೆ ಬಳಿ ಅದ್ದೂರಿ ಬರ್ತಡೇ ಆಚರಿಸಿಕೊಂಡ ಹಿನ್ನೆಲೆ ಬನಶಂಕರಿ ಪೊಲೀಸ್ ಠಾಣೆಯಲ್ಲೂ ಎಫ್ಐಆರ್ ದಾಖಲಾಗಿತ್ತು.
PublicNext
22/01/2022 10:38 am