ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು

ವರದಿ: ಬಲರಾಮ್. ವಿ

ಬೆಂಗಳೂರು: ಕಾರಿನಲ್ಲಿ ತಿರುಮಲಕ್ಕೆ ಹೋಗುವ ಕನ್ನಡಿಗರಿಗೆ ಆಂಧ್ರ ಪ್ರದೇಶದ ತಿರುಮಲದ ಭದ್ರತಾ ಸಿಬ್ಬಂದಿ ಅವಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹೌದು. ಕರ್ನಾಟಕದ ವಾಹನಗಳ ಮೇಲೆ ಕರ್ನಾಟಕ ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ರವರ ಸ್ಟಿಕ್ಕರ್ ಗಳನ್ನು ತಿರುಮಲದ ಭದ್ರತಾ ಸಿಬ್ಬಂದಿಗಳು ತೆಗೆಸಿ ಅವಮಾನ ಮಾಡಿದ್ದು, ಅಪ್ಪು ಅವರ ಅಭಿಮಾನಿಗಳಿಗೆ ಈ ಮೂಲಕ

ಅವಮಾನ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿಯೇ ಕೆ.ಆರ್.ಪುರ ಕ್ಷೇತ್ರದ ಬಿಬಿಎಂಪಿ ಕಚೇರಿ ಎದುರಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ರವರ ಬಳಗದ ವತಿಯಿಂದ ಅಯ್ಯಪ್ಪ ನಗರ ಶಾಖೆಯ ಅಧ್ಯಕ್ಷರಾದ ಕೃಷ್ಣಮೂರ್ತಿ ರವರ ನೇತೃತ್ವದಲ್ಲಿ ಪ್ರತಿಯೊಂದು ಆಂಧ್ರಪ್ರದೇಶದ ಬಸ್ ಗಳಿಗೆ ಅಪ್ಪು ರವರ ಸ್ಟಿಕ್ಕರ್ ಗಳನ್ನು ಅಂಟಿಸಿ ಅಭಿಮಾನ ಎಂಥದೆಂದು ತೋರಿಸಿದ್ದಾರೆ.

ಕನ್ನಡಿಗರನ್ನು ಕೆಣಕುವುದು ತಪ್ಪು, ಅದರಲ್ಲೂ ಅಪ್ಪು ಅಭಿಮಾನಿಗಳಿಗೆ ಅವಮಾನಿಸುವುದು ಸರಿಯಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ಹಾಗೂ ಅಪ್ಪು ಅಭಿಮಾನಿಗಳು ಪಾಲ್ಗೊಂಡಿದ್ದರು .

Edited By : Manjunath H D
PublicNext

PublicNext

30/04/2022 04:41 pm

Cinque Terre

36.3 K

Cinque Terre

1

ಸಂಬಂಧಿತ ಸುದ್ದಿ