ಬೆಂಗಳೂರು:ಕನ್ನಡದ ನಾಯಕ ನಟ ಚೇತನ್ ಕೊಂಚ ಡಿಫರಂಟ್ ಆಗಿಯೇ ಇದ್ದಾರೆ. ಇವರ ಮಾತು ಮತ್ತು ಯೋಚನೆ ಬೇರೆನೆ ಇರುತ್ತವೆ. ಅದರಂತೆ ಹಿಜಾಬ್ ಕಿಚ್ಚು ಹೊತ್ತಿ ಉರಿಯೋ ವೇಳೆಯಲ್ಲಿಯೇ ವಿವಾದಿತ ಹೇಳಿಕೆಯೊಂದನ್ನ ಕೊಟ್ಟು ಎಲ್ಲರ ಕೆಂಗಣ್ಣಿಗೂ ಗುರಿ ಆಗಿದ್ದಾರೆ.
ಹೌದು! ಚೇತನ್ ಈಗೊಂದು ಹೇಳಿಕೆಯನ್ನ ಫೇಸ್ ಬುಕ್ ಬರೆದಿದ್ದಾರೆ. ಯಾವುದೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸಬಾರದು, ಕುಂಕುಮ ಇಡಲೇಬಾರದು, ಕೂದಲಿಗೆ ಹೂ ಕೂಡ ಮುಡಿಲೇಬಾರದು. ವಿದ್ಯಾರ್ಥಿಗಳು ಜನಿವಾರವನ್ನೂ ಧರಿಸಬಾರದು, ಲಿಂಗ-ಕ್ರಾಸ್ ಚಿನ್ನೆಯನ್ನೂ ಹೀಗೆ ಏನನ್ನೂ ಹಾಕಲೇಬಾರದು ಅಂತಲೇ ಚೇತನ್ ಅಭಿಪ್ರಾಯ ಪಟ್ಟಿದ್ದಾರೆ.
ನಿಜವಾದ ಸಮಾನತೆ,ಜ್ಯಾತ್ಯಾತೀತತೆಗಾಗಿ ಬಹು ಸಂಖ್ಯಾತ-ಅಲ್ಪಸಂಖ್ಯಾತ-ಧಾರ್ಮಿಕ ಗುರುತುಗಳನ್ನ ಶಾಲೆಯಿಂದ ಹೊರಗಿಡಿ ಅಂತಲೇ ಚೇತನ್ ಹೇಳಿದ್ದಾರೆ.
PublicNext
17/02/2022 09:56 pm