ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪ್ಪು ಅಂತ್ಯ ಸಂಸ್ಕಾರ ಅಂತ್ಯ: ಶಾಂತಿ-ಸುವ್ಯವಸ್ಥೆ ಕಾಪಾಡಿದ ಪೊಲೀಸರಿಗೆ ಥ್ಯಾಂಕ್ಸ್ ಹೇಳಿದ ಗೃಹ ಸಚಿವ

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ಅಂತಿಮ ಸಂಸ್ಕಾರ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಿದ ರಾಜ್ಯದ ಪೊಲೀಸರು ಹಾಗು ಎಲ್ಲ ಅಧಿಕಾರಿಗಳಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಧನ್ಯವಾದ ತಿಳಿಸಿದ್ದಾರೆ.

ವಿಧಾನಸೌಧಲ್ಲಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಮಾರು 20 ಲಕ್ಷ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಎಲ್ಲವೂ ಶಾಂತಿಯುತವಾಗಿ ನೆರವೇರಿದೆ. ಇದರಲ್ಲಿ ಪೊಲೀಸರ ಶ್ರಮ ಬಹಳ ಇದೆ. ಬೆಂಗಳೂರಲ್ಲಿ 20 ಸಾವಿರ ಪೊಲೀಸರು, ಹೊರಜಿಲ್ಲೆಗಳಿಂದ ಒಂದೂವರೆ ಸಾವಿರ ಪೊಲೀಸರು, ಸೆಂಟ್ರಲ್ ಫೋರ್ಸ್ ಹಾಗೂ 50 ಕೆ.ಎಸ್.ಆರ್.ಪಿ ತುಕಡಿ ಸೇರಿ ಈ ಎಲ್ಲ ಸಿಬ್ಬಂದಿ ಕಾನೂನು-ಸುವ್ಯವಸ್ಥೆ ಕಾಪಾಡಿದ್ದಾರೆ. ಮಾಧ್ಯಮಗಳು ಕೂಡ ಒಟ್ಟರೆ ಪ್ರಸಂಗದ ಸುದ್ದಿ ಬಿತ್ತರಿಸಿದ್ದಾರೆ. ಅಂತಿಮ ದರ್ಶನ ಪಡೆಯಲಾಗದ ಅಭಿಮಾನಿಗಳಿಗೆ ಮಾಧ್ಯಮದ ಮೂಲಕವೇ ಎಲ್ಲ ಮಾಹಿತಿ ಕೊಟ್ಟಿದ್ದಾರೆ. ಎಲ್ಲರೂ ನಿದ್ದೆ ಬಿಟ್ಟು ಶ್ರಮಪಟ್ಟಿದ್ದಾರೆ. ರಾಜ್ ಕುಟುಂಬಕ್ಕೆ ಎಲ್ಲರ ಸಹಕಾರ ದೊರೆತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

31/10/2021 03:56 pm

Cinque Terre

1.49 K

Cinque Terre

0

ಸಂಬಂಧಿತ ಸುದ್ದಿ