ಬೆಂಗಳೂರು: ಮಹದೇವಪುರದ ಕ್ಷೇತ್ರದ ಕೈಕೊಂಡ್ರಹಳ್ಳಯಲ್ಲಿ ಎನ್.ಶೇಖರ್ ರೆಡ್ಡಿ ಹುಟ್ಟುಹಬ್ಬದ ಹಿನ್ನಲೆಯಲ್ಲಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರವನ್ನು ಕರ್ನಾಟಕ ರಾಜ್ಯ ರೆಡ್ಡಿ ಜನಸಂಘದ ನಿರ್ದೇಶಕ ಎನ್.ಶೇಖರ್ ರೆಡ್ಡಿ ಚಾಲನೆ ನೀಡಿದರು.ರಕ್ತದಾನ ಶಿಬಿರದಲ್ಲಿ 45ಕ್ಕೂ ಅಧಿಕ ಅಭಿಮಾನಿಗಳು ರಕ್ತದಾನ ಮಾಡಿದರು. ಇದೇ ವೇಳೆ ಪೌರ ಕಾರ್ಮಿಕರಿಗೆ ಬಟ್ಟೆಗಳನ್ನು ವಿತರಿಸುವ ಮೂಲಕ ಸಮಾಜಮುಖಿಯಾಗಿ ಎನ್.ಶೇಖರ್ ರೆಡ್ಡಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರ್ ರೆಡ್ಡಿ ಮುಖಂಡರಾದ ರಾಜಾರೆಡ್ಡಿ, ಪ್ರಶಾಂತ, ಪ್ರದೀಪ್, ರಘು, ರಾಜೇಶ್ ಇದ್ದರು.
Kshetra Samachara
08/10/2022 05:12 pm