ಬೆಂಗಳೂರು: ಜೀವನದ ಮೋಜು ಮಸ್ತಿಗಾಗಿ, ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಗಳನ್ನು ಕಳ್ಳತನ ಮಾಡುತ್ತಿದ್ದ ರಾಜ್ಯ ಹಾಗೂ ಅಂತರ್ ರಾಜ್ಯ ಕಳ್ಳರನ್ನು ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದ ಮೋಹನ್, ಸಂಪತ್, ಅಶೋಕ್ ಹಾಗೂ ಆಂಧ್ರಪ್ರದೇಶ ಮೂಲದ ಕೃಷ್ಣಮೂರ್ತಿ, ಮೋಹನ್ ವೆಂಕಟರಾಮ ಬಂಧಿತ ಆರೋಪಿಗಳು.. ಆರೋಪಿಗಳು ಕೆಆರ್ ಪುರ ಸರಹದ್ದಿನಲ್ಲಿ ಮೊಬೈಲ್, ಎಟಿಎಂ ಕಾರ್ಡ್ ಹಾಗೂ ರಾತ್ರಿ ವೇಳೆ ಅಂಗಡಿ ಮಳಿಗೆಗಳ ಬೀಗ ಮುರಿದು ಹಣ ದೋಚಿ ಐಷಾರಾಮಿ ಜೀವನ ನಡೆಸಲು ಮುಂದಾಗಿದ್ದರೂ, ಆದ್ರೆ ಪೊಲೀಸರು ಅವರ ಐಷಾರಾಮಿ ಜೀವನಕ್ಕೆ ಎಡೆಮುರಿ ಕಟ್ಟಿದ್ದಾರೆ..
ಇನ್ನೂ ಬಂಧಿತ ಆರೋಪಗಳಿಂದ ಐದು ಮೊಬೈಲ್ ಹಾಗೂ ಹಲವು ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
03/10/2022 04:36 pm