ಬೆಂಗಳೂರು: ಸೆ.ಅ 26 ರಿಂದ 28 ರ ವರೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬೆಂಗಳೂರು ನಗರಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ ಮತ್ತು ಸುರಕ್ಷತೆಯ ಹಿತದೃಷ್ಟಿಯಿಂದ ಕಬ್ಬನ್ ಪಾರ್ಕ್ ಮತ್ತು ಅಶೋಕನಗರ ಸಂಚಾರ ಪೊಲೀಸ್ ವ್ಯಾಪ್ತಿಯಲ್ಲಿ ಏಕಮುಖ ಸಂಚಾರ ರಸ್ತೆಯನ್ನು ತಾತ್ಕಾಲಿಕವಾಗಿ ದ್ವಿಮುಖಿ ಸಂಚಾರ ರಸ್ತೆಗಳನ್ನಾಗಿ ಮಾರ್ಪಡಿಸಲಾಗಿದೆ.
ಕಬ್ಬನ್‌ಪಾರ್ಕ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಭವನ ರಸ್ತೆಯನ್ನು ರಾಜಭವನ ಮುಖ್ಯದ್ವಾರದಿಂದ ಪೊಲೀಸ್ ತಿಮ್ಮಯ್ಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಿ ಸೆ. 27 ರವರೆಗೆ 3 ದಿನಗಳ ವರೆಗೆ ರಾಷ್ಟ್ರಪತಿ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ.
ವಿಧಾನ ಸೌಧದ ನಿರ್ಗಮನ ದ್ವಾರ (ಗೇಟ್ ನಂ-4) ರಲ್ಲಿ ಹಾಲಿ ಪ್ರವೇಶ ನಿಷೇಧವಿದ್ದು, ಸೆ.27 ರವರೆಗೆ 3 ದಿನಗಳ ವರೆಗೆ ಇನ್ಸಾಯ್ ಸಂಚರಿಸುವ ಸಮಯದಲ್ಲಿ ಮುಕ್ತ ಪ್ರವೇಶಕ್ಕೆ ಅನುವು ಮಾಡಿಕೊಡಲಾಗಿದೆ.
ಎಲ್ಲೆಲ್ಲಿ ಮಾರ್ಗ ಬದಲಾವಣೆ:
* ಅಶೋಕನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ರಿಚ್ಚಂಡ್ ರಸ್ತೆಯಲ್ಲಿ ರಿಚ್ಮಂಡ್ ವೃತ್ತದಿಂದ ಬಾಲ್ಡ್‌ವಿನ್ ಬಾಲಕಿಯರ ಶಾಲೆಯ ವೃತ್ತದವರೆಗೆ ತಾತ್ಕಾಲಿಕವಾಗಿ ದ್ವಿಮುಖ ಸಂಚಾರ ರಸ್ತೆಯನ್ನಾಗಿ ಮಾರ್ಪಡಿಸಲಾಗಿದ್ದು, ಸೆ. 27 ರವರೆಗೆ 3 ದಿನಗಳ ವರೆಗೆ ರಾಷ್ಟ್ರಪತಿ ಅವರುಎ ಕಾನ್ಸಾಯ್ ಸಂಚರಿಸುವ ಸಮಯದಲ್ಲಿ ಮಾತ್ರ ಅನುವು ಮಾಡಿಕೊಡಲಾಗಿದೆ.
* ಸೆ. 26 ರಂದು ಸಂಜೆ 5.30 ಗಂಟೆಯಿಂದ 6 ಗಂಟೆಯ ವರೆಗೆ ಹಳೆ ವಿಮಾನ ನಿಲ್ದಾಣ ರಸ್ತೆ – ಎಂ.ಜಿ.ರಸ್ತೆ - ಡಿಕನ್ಸನ್ ರಸ್ತೆ - ಕೆ.ಆರ್ ರಸ್ತೆ ಮತ್ತು ಕಬ್ಬನ್ ರಸ್ತೆ - ರಾಜಭವನ ರಸ್ತೆ.
* ಸೆ.27 ರಂದು ಬೆಳಿಗ್ಗೆ 9.30 ಗಂಟೆಯಿಂದ 11.30 ಗಂಟೆಯ ವರೆಗೆ ರಾಜಭವನ ರಸ್ತೆ - ಇನ್ ಫೆಂಟ್ರಿ ರಸ್ತೆ – ಕೆ.ಆರ್.ರಸ್ತೆ ಮತ್ತು ಕಬ್ಬನ್ ರಸ್ತೆ: - ಡಿಕನ್ಸನ್ ರಸ್ತೆ - ಎಂ.ಜಿ.ರಸ್ತೆ – ಹಳೇ ವಿಮಾನ ನಿಲ್ದಾಣ ರಸ್ತೆ - ಸುರಂಜನ್ ದಾಸ್ ರಸ್ತೆ,
* ಮಧ್ಯಾಹ್ನ 140 ಗಂಟೆಯಿಂದ ರಾತ್ರಿ 8.00 ಗಂಟೆಯವರೆಗೆ ರಾಜಭವನ ರಸ್ತೆ - ಇನ್ ಫೆಂಟ್ರಿ ರಸ್ತೆ - ಸ್ವೀಟ್ಸ್ ರಸ್ತೆ - ಕಸ್ತೂರಿ ಬಾ ರಸ್ತೆ – ರಿಚ್ಯಂಡ್ ರಸ್ತೆ - ಲ್ಯಾಂಗ್ ಫೋರ್ಡ್ ರಸ್ತೆ - ಅಂಬೇಡ್ಕರ್ ರಸ್ತೆ
* 28ರಂದು ಬೆಳಿಗ್ಗೆ 9ಗಂಟೆಯ ವರೆಗೆ ರಾಜಭವನ ರಸ್ತೆ- ಇನ್ ಫೆಂಟ್ರಿ ರಸ್ತೆ - ಕೆ. ಆರ್. ರಸ್ತೆ ಮತ್ತು ಕಬ್ಬನ್ ರಸ್ತೆ - ಡಿಕನ್ಸನ್ ರಸ್ತೆ - ಎಂಜಿ ರಸ್ತೆ - ಹಳೇ ವಿಮಾನ ನಿಲ್ದಾಣ ರಸ್ತೆ.
Kshetra Samachara
26/09/2022 02:44 pm