ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆತಂಕಕ್ಕೆ ಎಡೆಮಾಡಿಕೊಟ್ಟ ಅನುಮಾನಾಸ್ಪದ ಬ್ಯಾಗ್

ಬೆಂಗಳೂರು: ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಸಣ್ಣ ಬ್ಯಾಗ್ ಒಂದು ಕೆಲ ಕಾಲ ಜನರಲ್ಲಿ ಅತಂಕ ಮೂಡಿಸಿತ್ತು. ಇದನ್ನ ಕಂಡ ಸ್ಥಳೀಯರು ಕಂಟ್ರೋಲ್ ರೂಂಗೆ ಕರೆಮಾಡಿದ್ರು. ಕರೆ ಬಂದ ತಕ್ಷಣ ಸ್ಥಳಕ್ಕೆ ಅಶೋಕನಗರ ಪೊಲೀಸ್ರು ಮತ್ತು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಭೇಟಿ ನೀಡಿ ಪರಿಶಶೀಲನೆ ನಡೆಸಿದ್ರು.

ಈ ಘಟನೆ ರಿಚ್ಮಂಡ್ ಸರ್ಕಲ್ ನಲ್ಲಿ ನಡೆದಿದೆ. ಅನುಮಾನಸ್ಪದವಾಗಿ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ಸಣ್ಣ ಲೈಟ್ ಬ್ಲಿಂಕ್ ಆಗ್ತಿದ್ದರಿಂದ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಸಹಜವಾಗಿಯೇ ಲೈಟ್ ಬ್ಲಿಂಕ್ ಆದಾಗ ಟೈಂ ಬಾಂಬ್ ಇರಬುದೆಂದು ಆತಂಕ ಮೂಡಿತ್ತು.ಸ್ಥಳಕ್ಕೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಡೆಕೋರೇಷನ್ ಗೆ ಬಳಸುವ ಸ್ಟಿರಿಯೋ ಲೈಟ್ ನಂತಹ ವಸ್ತು ಪತ್ತೆಯಾಗಿದೆ. ಜೊತೆಗೆ ವೇಸ್ಟ್ ಪೇಪರ್ಗಳು ಮತ್ತು ಬಲೂನು ಸಿಕ್ಕಿದ್ದು ಪೊಲೀಸ್ರು ನಿಟ್ಟಿಸುರು ಬಿಟ್ಟಿದ್ದಾರೆ.

ಇನ್ನು ಯಾವುದೇ ಪ್ಯಾನಿಕ್ ಕಾಲ್ ಹುಸಿ ಬಾಂಬ್ ಕರೆಯನ್ನ ನೆಗ್ಲೆಕ್ಟ್ ಮಾಡುವಂತಿಲ್ಲ ಎಂಬ ಕಾರಣಕ್ಕೆ ಸ್ಥಳಕ್ಕೆ ಪೊಲೀಸ್ರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

09/08/2022 09:44 pm

Cinque Terre

2.24 K

Cinque Terre

0

ಸಂಬಂಧಿತ ಸುದ್ದಿ