ಬೆಂಗಳೂರು : ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹೂಗಳಿಗೆ ಭಾರಿ ಬೇಡಿಕೆ ಶುರುವಾಗಿದೆ. ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹೀಗೆ ಸಾಲು ಸಾಲು ಹಬ್ಬಗಳು ಇರುವುದರಿಂದ ಜನರು ಹೂ ಖರೀದಿಗೆ ಮುಗಿಬಿದ್ದಿದ್ದಾರೆ.
ಬೇಡಿಕೆ ತಕ್ಕಂತೆ ಹೂವುಗಳಲ್ಲಿಲದಿರುವುದರಿಂದ ದುಪ್ಪಟ್ಟು ಹಣ ಕೊಟ್ಟು ಜನರು ಖರೀದಿಸತೊಡಗಿದ್ದಾರೆ. ಒಂದರ ನಂತರ ಮತ್ತೊಂದರಂತೆ ಹಬ್ಬಗಳು ಬರುತ್ತಿದ್ದು, ಧಾರ್ಮಿಕ ವಿಧಿ ವಿಧಾನಗಳ ನೇರವೇರಿಕೆಗೆ ಹೂಗಳ ಅಗತ್ಯ ಹೆಚ್ಚಿರುತ್ತೆ. ಹೀಗಾಗಿ ಹೂಗಳಿಗೆ ಭಾರಿ ಪ್ರಾಧಾನ್ಯತೆ ಇದ್ದು, ಮಳೆಗಾಲ ಬೇರೆ ಇರುವುದರಿಂದ ಹೂವಿನ ಪೂರೈಕೆ ಕಡಿಮೆ.ಹೀಗಾಗಿ ಈ ಬಾರಿಯ ಹೂವಿನ ಬೆಲೆ ಹೆಚ್ಚಳದಿಂದ ಹೂ ಬೆಳೆಬೆಳೆಯುವ ರೈತರ ಮೊಗದಲ್ಲಿ ಸಂತಸ ಉಂಟುಮಾಡಿದೆ. ಆದರೆ ಮಧ್ಯವರ್ತಿಗಳ ಹಾವಳಿ ಬೆಲೆ ಏರಿಕೆಗೆ ಸವಾಲಾಗಿ ಪರಿಣಮಿಸಿದೆ.
Kshetra Samachara
02/08/2022 07:23 pm