ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಜಯಂತಿ ಹಾಗೂ ಗ್ರಾಮಾಂತರ ಮಂಡಲದ ಜನ ಹಿತ ಸರ್ವೆ ಸಮೀಕ್ಷೆ ಸಭೆ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಕಾಟಂನಲ್ಲೂರಿನ ಶ್ರೀ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಜಯಂತಿ ಹಾಗೂ ಗ್ರಾಮಾಂತರ ಮಂಡಲದ ಜನಹಿತ ಸರ್ವೆ ಸಮೀಕ್ಷೆ ಪ್ರಗತಿ ಪರಿಶೀಲನಾ ಸಭೆಯಲ್ಲಿ‌ ನಡೆಸಲಾಯಿತು.

ಶಾಸಕ ಅರವಿಂದ ಲಿಂಬಾವಳಿ ಅವರು ಭಾಗವಹಿಸಿ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ ರವರ ಹಾಗೂ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.

ಈ ವೇಳೆ ಇಮ್ಮಡಿಹಳ್ಳಿಯ ಮುಖಂಡರಾದ ಶ್ರೀ ಶ್ರೀನಿವಾಸ್ ಜೀ ರವರು 'ಡಾ. ಶ್ಯಾಮ ಪ್ರಸಾದ್ ಮುಖರ್ಜಿ ನಡೆದು ಬಂದ ಹಾದಿ' ವಿಷಯದ ಕುರಿತಂತೆ ಭೋದನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ನಟರಾಜ್ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

07/07/2022 05:30 pm

Cinque Terre

784

Cinque Terre

0

ಸಂಬಂಧಿತ ಸುದ್ದಿ