ಬೆಂಗಳೂರು: ಮಹದೇವಪುರ ಕ್ಷೇತ್ರದ ಬೆಳಂದೂರು ವಾರ್ಡ್‌ನ ಕಾರ್ಮಲಾರಂ ರೈಲ್ವೆ ನಿಲ್ದಾಣ ಬಳಿ ಸುಸಜ್ಜಿತವಾದ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಚರಂಡಿ ನೀರು ನಿಲುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ರಸ್ತೆ ಬದಿಯಲ್ಲಿ ವಾಣಿಜ್ಯ ಮಳಿಗೆಗಳು ಬಹಮಾಡಿ ವಸತಿ ನಿಲಯಗಳ ಕಟ್ಟಡಗಳಿದ್ದು, ಚಿಕ್ಕದಾದ ಚರಂಡಿಗೆ ಕಟ್ಟಡಗಳಲ್ಲಿ ಬಳಕೆಯಾದ ಕೊಳಚೆ ನೀರು ಬರುವುದರಿಂದ ಸಮಸ್ಯೆ ಉಂಟು ಮಾಡಿದೆ.
ಕೊಳಚೆ ನೀರು ಸರಾಗವಾಗಿ ಹರಿಯದೇ ರಸ್ತೆ ಮೇಲೆ ನೀರು ನಿಲುತ್ತಿದೆ.. ಇತ್ತೀಚೆಗೆ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿದ್ದು, ಕೆಲವೊಮ್ಮೆ ಇದರಿಂದ ಸಂಚಾರ ದಟ್ಟಣೆಯು ಉಂಟಾಗುತ್ತಿದೆ.
ರೈಲ್ವೆ ನಿಲ್ದಾಣ ಸಮೀಪ ಇರುವುದರಿಂದ ಪಾದಚಾರಿಗಳು ಅಧಿಕವಾಗಿ ಓಡಾಡುತ್ತಾರೆ. ರಸ್ತೆ ಮೇಲೆ ಕೊಳಚೆ ನೀರು ಹರಿಯುವುದರಿಂದ ದುರ್ವಾಸನೆ ಬೀರುತ್ತಿದ್ದು, ರೋಗಗಳು ಹರಡುತ್ತಿವೆ.
Kshetra Samachara
24/05/2022 01:42 pm