ಮಹದೇವಪುರ ಕ್ಷೇತ್ರದ ವರ್ತೂರು ಸಮೀಪದ ವರಪುರಿ ಗ್ರಾಮದಲ್ಲಿ ಜೈ ಶ್ರೀರಾಮ್ ಯುವಕರ ಸಂಘದಿಂದ ನಗರದೇವತೆ ಅಣ್ಣಮ್ಮ ದೇವಿಯ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಳಿಕ ಮಾತನಾಡಿದ ಗ್ರಾಮಸ್ಥರಾದ ಕೆ. ಮಂಜುನಾಥ್, ನಾಲ್ಕು ದಿನಗಳ ಕಾಲ ನಡೆಯುವ ಅಣ್ಣಮ್ಮ ದೇವಿಯ ಉತ್ಸವದಲ್ಲಿ ತಾಯಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಲಾಗಿದೆ ಎಂದರು.
ಉತ್ಸವದಲ್ಲಿ ವೈಟ್ ಫೀಲ್ಡ್, ವರ್ತೂರು, ವರ್ತೂರು ಕೋಡಿ, ಗುಂಜೂರು ಸೇರಿದಂತೆ ಹತ್ತಾರು ಗ್ರಾಮಗಳಿಂದ ಭಕ್ತಾದಿಗಳು ಬಂದು ಅಣ್ಣಮ್ಮ ದೇವಿಯ ಉತ್ಸವದಲ್ಲಿ ಭಾಗವಹಿಸಿದ್ದರು. ಉತ್ಸವದಲ್ಲಿ ನೆರೆದಿದ್ದಂತಹ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಹೂವಿನ ಪಲ್ಲಕ್ಕಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಣ್ಣಮ್ಮ ದೇವಿಯ ಮೆರವಣಿಗೆ ಮಾಡಲಾಗುತ್ತದೆ ಎಂದರು.
PublicNext
25/07/2022 04:06 pm