ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಪೌಂಡ್ ಗೋಡೆ ಕುಸಿದು ನಾಲ್ವರು ಕಾರ್ಮಿಕರ ಸಾವು; S.P ವಂಶೀಕೃಷ್ಣ

ಹೊಸಕೋಟೆಯ ತಿರುಮಶೆಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿ ಸೌಪರ್ಣಿಕಾ ಅಪಾರ್ಟ್‌ಮೆಂಟ್ ಕಾರ್ಮಿಕರ ಮೇಲೆ ತಡೆಗೋಡೆ ಕುಸಿದು 4 ಜನ ಸಾವನ್ನಪ್ಪಿದ ಪ್ರಕರಣ ಕುರಿತು ಜಿಲ್ಲಾ ಎಸ್.ಪಿ.ವಂಶೀಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ಮೃತರೆಲ್ಲರೂ ಬಿಹಾರದ ಮಧುಬನ ಜಿಲ್ಲೆಯವರು. ಅಪಾರ್ಟ್‌ಮೆಂಟ್‌ಗೆ ಹೊಂದಿಕೊಂಡಂತೆ ಐದು ವರ್ಷಗಳ ಹಿಂದೆ ತಡೆಗೋಡೆ ನಿರ್ಮಿಸಿದ್ದರು. ಆ ಗೋಡೆಗೆ ಹೊಂದಿಕೊಂಡೇ ಸೌಪರ್ಣಿಕಾ ಅಪಾರ್ಟ್‌ಮೆಂಟ್ ನೌಕರರು ಶೆಡ್ ನಿರ್ಮಿಸಿಕೊಂಡು ವಾಸವಿದ್ದರು. ಒಂಬತ್ತು ಜನ‌ ಮಲಗಿದ್ದ ವೇಳೆ ಕಳೆದ ರಾತ್ರಿ 1 ಗಂಟೆ ಸುಮಾರಿಗೆ 20ರಿಂದ 30 ಮೀಟರ್ ತಡೆಗೋಡೆ ಕುಸಿದು ನಾಲ್ವರು ಮೃತಪಟ್ಟಿದ್ದರೆ, ನಾಲ್ಕು ಜನಕ್ಕೆ ಗಾಯಗಳಾಗಿವೆ. ಓರ್ವ ಬಚಾವಾಗಿದ್ದಾನೆ.

ಈ ದುರಂತ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಂತರ ಕಾನೂನು ಜರುಗಿಸಾಗುವುದು ಎಂದಿದ್ದಾರೆ.

Edited By :
PublicNext

PublicNext

21/07/2022 04:08 pm

Cinque Terre

26.89 K

Cinque Terre

0

ಸಂಬಂಧಿತ ಸುದ್ದಿ