ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಳೆತೂರಲ್ಲಿ ಶ್ರೀ ರುದ್ರದೇವತಾ ಸಮೇತ ಸತ್ಯ ಹರಿಶ್ಚಂದ್ರ ಶಿಲಾ ವಿಗ್ರಹ ಪ್ರತಿಷ್ಠಾಪನೆ

ಮಹದೇವಪುರದ ಬೆಳೆತೂರನಲ್ಲಿ ರುದ್ರಭೂಮಿ ಸೇವಾ ಟ್ರಸ್ಟ್ ವತಿಯಿಂದ ಶ್ರೀ ರುದ್ರದೇವತಾ ಸಮೇತ ಸತ್ಯ ಹರಿಶ್ಚಂದ್ರ ಶಿಲಾವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.

ಗಂಗಾ ಪೂಜೆ, ಮಹಾ ಗಣಪತಿ ಪೂಜೆ, ಕಳಸರಾಧನೆ, ವಸ್ತು ಹೋಮ ಸೇರಿದಂತೆ ಅನೇಕ ವಿಧದ ಪೂಜೆ ಕಾರ್ಯಗಳನ್ನು ನೆರವೇರಿಸಲಾಯಿತು. ಬೆಳೆತೂರಿನ ಪ್ರಮುಖ ಬೀದಿಗಳಲ್ಲಿ ತಮಟೆ, ವೀರಗಾಸೆ, ಡೊಳ್ಳು ಕುಣಿತ, ಮಂಗಳವಾದ್ಯಗಳ ಮೂಲಕ ಕಂಭೋತ್ಸವದ ಮೆರವಣಿಗೆ ಮಾಡಲಾಯಿತು.

ಬೆಳತೂರಿನ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಬಳಿಕ ಗ್ರಾಮದ ಮುಖಂಡರಾದ ಪುರುಷೋತ್ತಮ ಅವರು ಯಾವುದೇ ಧರ್ಮ, ಪಂಥ, ಭಾಷೆಯ ತಾರತಮ್ಯ ಇಲ್ಲದೆ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗೊಳಿಸಿದ್ದು, ಪ್ರತಿಯೊಬ್ಬರಿಗೂ ದೇವರು ಧನ, ಧಾನ್ಯವನ್ನು ನೀಡಲಿ ಎಂದು ಹಾರೈಸಿದರು. ದೇವಸ್ಥಾನದ ಪ್ರಮುಖರಾದ ರವಿಕುಮಾರ್, ದೇವರಾಜ್, ಬಿ.ಎನ್. ರವಿ, ಭಾಸ್ಕರ್, ಭೀಮೇಶ್, ನವೀನ್ ಕುಮಾರ್, ಮಂಜುನಾಥ ಇದ್ದರು.

Edited By :
PublicNext

PublicNext

18/08/2022 07:52 pm

Cinque Terre

42.55 K

Cinque Terre

1

ಸಂಬಂಧಿತ ಸುದ್ದಿ