ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೋಶಾಲೆ ಮೇಲೆ ಚಿರತೆ ದಾಳಿ: ಎರಡು ಹಸುಗಳಿಗೆ ಗಾಯ, ಕರು ನಾಪತ್ತೆ

ದೊಡ್ಡಬಳ್ಳಾಪುರ: ಘಾಟಿ ಸುಬ್ರಮಣ್ಯ ಬಳಿಯ ರಾಷ್ಟ್ರೋತ್ಥಾನ ಗೋಶಾಲೆಯ ಮೇಲೆ ಇಂದು ಚಿರತೆ ದಾಳಿ ನಡೆಸಿದ್ದು, ಚಿರತೆ ದಾಳಿಗೆ ಹಸುಗಳು ಗಾಯಗೊಂಡಿದ್ದು, ಒಂದು ಕರು ನಾಪತ್ತೆಯಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯ ಬಳಿಯ ಅರಣ್ಯ ಪ್ರದೇಶದ ಅಂಚಿನಲ್ಲಿ ರಾಷ್ಟ್ರೋತ್ಥಾನ ಗೋಶಾಲೆ ಇದೆ. ಗೋಶಾಲೆಯಲ್ಲಿ 700ಕ್ಕೂ ದೇಶಿ ತಳಿಯ ದನಕರುಗಳಿವೆ. ಗೋಶಾಲೆಯ ದನಕರುಗಳನ್ನ ಮೇಯಲು ಅರಣ್ಯ ಪ್ರದೇಶಕ್ಕೆ ಬಿಡಲಾಗುತ್ತೆ. ಇಂದು ಮಧ್ಯಾಹ್ನ ಮೇಯುತ್ತಿದ್ದ ಹಸುಗಳ ಮೇಲೆ ಚಿರತೆ ದಾಳಿ ನಡೆಸಿದೆ. ಚಿರತೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಒಂದು ಹಸು ಅಲ್ಲಿಯೇ ಕುಸಿದು ಬಿದ್ದಿದೆ. ಒಂದು ಹಸು ತಪ್ಪಿಸಿಕೊಂಡು ಬಂದಿದೆ. ಇನ್ನೊಂದು ನಾಪತ್ತೆಯಾಗಿದೆ.

ಮಾಕಳಿ ಬೆಟ್ಟ ಮತ್ತು ಘಾಟಿ ಅರಣ್ಯ ಪ್ರದೇಶದಲ್ಲಿ ಚಿರತೆ ಹಲವು ದಿನದಿಂದ ಬಿಡುಬಿಟ್ಟಿದ್ದು, ಅರಣ್ಯ ಪ್ರದೇಶದ ಸುತ್ತಮುತ್ತಲಿನ ಹಳ್ಳಿಗಳ ಮೇಲೆ ಆಗಾಗ ದಾಳಿ ಮಾಡುತ್ತಿರುತ್ತದೆ, ಈಗ ಗೋಶಾಲೆಯ ಮೇಲೆ ದಾಳಿ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ.

Edited By : Nagaraj Tulugeri
Kshetra Samachara

Kshetra Samachara

31/08/2022 06:24 pm

Cinque Terre

1.22 K

Cinque Terre

0

ಸಂಬಂಧಿತ ಸುದ್ದಿ