ಬೆಂಗಳೂರು:- ನಗರದ ಪೂರ್ವವಲಯ ವಸಂತನಗರದ ಡೋಬಿ ಘಾಟ್ನ ಮನೆ ರೂಮ್ ನಲ್ಲಿ ಹಾವು ಕಾಣಿಸಿಕೊಂಡಿದ್ದು, ಹಾವು ಬುಸು ಗುಟ್ಟೋದನ್ನ ಗಮನಿಸಿದ ಮನೆಯವರು ಬಿಬಿಎಂಪಿ ಹಾವು ಸಂರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.
ಸ್ನೇಕ್ ರೆಸ್ಕ್ಯೂ ಟೀಂ ಮನೆ ಒಳಗಡೆ ಇದ್ದಂತ ಹಾವನ್ನು ಹಿಡಿದು ರಕ್ಷಿಸಿದ ಮೇಲೆ ಗೊತ್ತಾಯ್ತು ಇದು ನಾಗರಹಾವಲ್ಲ ಕೇರೆ ಹಾವೆಂದು.
ಪೂರ್ವವಲಯ ಅರಣ್ಯ ಘಟಕದ ವನ್ಯಜೀವಿ ಸಂರಕ್ಷಕ ಮೋಹನ್ ತಂಡ ಹೆಣ್ಣೂರು ಮುಖ್ಯ ರಸ್ತೆಲಿ ಮತ್ತೊಂದು ಹಾವನ್ನು ರಕ್ಷಿಸಿದೆ. ಕೊತ್ತನೂರು ಪೊಲೀಸ್ ಸ್ಟೇಷನ್ ಪಕ್ಕದ ರಿಲಯನ್ಸ್ ಟ್ರೆಂಡ್ಸ್ ನ ಕೆಳ ಮಹಡಿಯ ವಾಹನ ನಿಲ್ದಾಣದ ಜಾಗದಲ್ಲಿ ಹಾವು ಕಾಣಿಸಿಕೊಂಡಿತ್ತು. ಕಟ್ಟಡದ ನೆಲಹಾಸು ಕಲ್ಲಿನ ಹಿಂಬದಿಲಿ ಅವಿತುಕೊಂಡಿದ್ದ ಕೆರೆ ಹಾವನ್ನು ರಕ್ಷಣೆ ಮಾಡಿ ಸೂಕ್ತವಾದ ಆವಾಸಸ್ಥಳದಲ್ಲಿ ಬಿಡಲಾಗಿದೆ..
Kshetra Samachara
27/04/2022 07:46 am